ವಿಂಡೀಸ್ ತಂಡದ ಆಸೆ ಜೀವಂತ

7

ವಿಂಡೀಸ್ ತಂಡದ ಆಸೆ ಜೀವಂತ

Published:
Updated:

ಪಳ್ಳೆಕೆಲೆ (ಪಿಟಿಐ): ಕೊನೆಯ ಹಂತದಲ್ಲಿ ಎಡವಿ ಗೆಲುವಿನ ಅವಕಾಶ ಕೈಚೆಲ್ಲಿದ ನ್ಯೂಜಿಲೆಂಡ್ ಭಾರಿ ದಂಡವನ್ನೇ ತೆತ್ತಿದೆ. ಕಾರಣ ಈ ತಂಡದವರು ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.ಕ್ಷಣಕ್ಷಣಕ್ಕೆ ಕುತೂಹಲ ಕೆರಳಿಸುತ್ತಾ ಹೋದ ಈ ಪಂದ್ಯದಲ್ಲಿ ಗೆದ್ದ ವೆಸ್ಟ್‌ಇಂಡೀಸ್ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಪಳ್ಳೆಕೆಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸೂಪರ್ 8 ಹಂತದ ಈ ಪಂದ್ಯ ರೋಚಕ ಟೈ ಆಯಿತು. ಆದರೆ ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸಿದ ವಿಂಡೀಸ್ ತಂಡದ ಭವಿಷ್ಯ ಉಳಿದ ತಂಡಗಳ ಫಲಿತಾಂಶದ ಮೇಲೆ ಅವಲಂಬಿಸಿದೆ.ಈ ಪಂದ್ಯದಲ್ಲಿ ವಿಂಡೀಸ್‌ನ 139 ರನ್‌ಗಳಿಗೆ ಉತ್ತರವಾಗಿ ನ್ಯೂಜಿಲೆಂಡ್ ಕೂಡ 20 ಓವರ್‌ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 139 ರನ್ ಗಳಿಸಿತು. ಗೆಲ್ಲಲು ಕಿವೀಸ್ ಬಳಗಕ್ಕೆ ಕೊನೆಯ ಓವರ್‌ನಲ್ಲಿ 14 ರನ್‌ಗಳು ಬೇಕಿದ್ದವು.

ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ನಾಯಕ ರಾಸ್ ಟೇಲರ್ ಹಾಗೂ ಡಗ್ ಬ್ರೇಸ್‌ವೆಲ್ 13 ರನ್ ಮಾತ್ರ ಗಳಿಸಿದರು.ಮಾರ್ಲೊನ್ ಸ್ಯಾಮುಯೆಲ್ಸ್ ಮಾಡಿದ ಈ ಓವರ್‌ನಲ್ಲಿ ಟೇಲರ್ ಒಂದು ಸಿಕ್ಸರ್ ಕೂಡ ಎತ್ತಿದರು. ಕೊನೆಯ ಎಸೆತದಲ್ಲಿ ಎರಡು ರನ್ ಬೇಕಿತ್ತು. ಆದರೆ ಎರಡನೇ ರನ್‌ಗಾಗಿ ಓಡುವಾಗ ಬ್ರೇಸ್‌ವೆಲ್ ರನ್‌ಔಟ್ ಆದರು. ಈ ಕಾರಣ ಪಂದ್ಯ ಟೈ ಆಯಿತು. ಟೇಲರ್ (ಔಟಾಗದೆ 62; 40 ಎಸೆತ, 3 ಬೌಂಡರಿ, 3 ಸಿಕ್ಸರ್) ನಡೆಸಿದ ಪ್ರಯತ್ನ ಸಾಕಾಗಲಿಲ್ಲ.ಫಲಿತಾಂಶ ನಿರ್ಧರಿಸಲು ಸೂಪರ್ ಓವರ್ ಮೊರೆ ಹೋಗಲಾಯಿತು. ಸ್ಯಾಮುಯೆಲ್ಸ್ ಮಾಡಿದ ಓವರ್‌ನಲ್ಲಿ ನ್ಯೂಜಿಲೆಂಡ್ ತಂಡದ ಟೇಲರ್ ಹಾಗೂ ಬ್ರೆಂಡನ್ ಮೆಕ್ಲಮ್ ಸೇರಿ 17 ರನ್ ಕಲೆಹಾಕಿದರು. 18 ರನ್‌ಗಳ ಗುರಿ ಬೆನ್ನಟ್ಟಿದ ವಿಂಡೀಸ್ ತಂಡಕ್ಕೆ ಕ್ರಿಸ್ ಗೇಲ್ ಹಾಗೂ ಸ್ಯಾಮುಯೆಲ್ಸ್ ಐದು ಎಸೆತಗಳಲ್ಲಿ ಗೆಲುವು ತಂದುಕೊಟ್ಟರು.

ಈ ಓವರ್ ಬೌಲ್ ಮಾಡಿದ್ದು ಟಿಮ್ ಸೌಥಿ. ಅವರು ಹಾಕಿದ ಮೊದಲ ಎಸೆತವನ್ನೇ ಗೇಲ್ ಸಿಕ್ಸರ್ ಎತ್ತಿದರು. ಆ ಎಸೆತ ನೋಬಾಲ್ ಆಗಿತ್ತು.

ವೆಸ್ಟ್‌ಇಂಡೀಸ್ 19.3 ಓವರ್‌ಗಳಲ್ಲಿ 139

ಜಾನ್ಸನ್ ಚಾರ್ಲ್ಸ್ ಸಿ ಹಾಗೂ ಬಿ ಡಗ್ ಬ್ರೇಸ್‌ವೆಲ್  08

ಕ್ರಿಸ್ ಗೇಲ್ ಸಿ ಬ್ರೆಂಡನ್ ಮೆಕ್ಲಮ್ ಬಿ ಟಿಮ್ ಸೌಥಿ  30

ಆ್ಯಂಡ್ರೆ ರಸೆಲ್ ಸಿ ಜೇಮ್ಸ ಫ್ರಾಂಕ್ಲಿನ್ ಬಿ ಡಗ್ ಬ್ರೇಸ್‌ವೆಲ್  06

ಮಾರ್ಲೊನ್ ಸ್ಯಾಮುಯೆಲ್ಸ್ ಸಿ ಟಿಮ್ ಸೌಥಿ ಬಿ ನೇಥನ್ ಮೆಕ್ಲಮ್  24

ಡರೆನ್ ಬ್ರಾವೊ ಬಿ ನೇಥನ್ ಮೆಕ್ಲಮ್  16

ಕೀರನ್ ಪೊಲಾರ್ಡ್ ಸಿ ರಾಸ್ ಟೇಲರ್ ಬಿ ಡಗ್ ಬ್ರೇಸ್‌ವೆಲ್  28

ದಿನೇಶ್ ರಾಮ್ದಿನ್  ಸಿ ರಾಸ್ ಟೇಲರ್ ಬಿ ರೋನಿ ಹೀರಾ  01

ಡರೆನ್ ಸಮಿ ಸಿ ಜೇಮ್ಸ ಫ್ರಾಂಕ್ಲಿನ್ ಬಿ ಟಿಮ್ ಸೌಥಿ  11

ಸುನಿಲ್ ನಾರಾಯಣ್ ಬಿ ಟಿಮ್ ಸೌಥಿ  03

ಸ್ಯಾಮುಯೆಲ್ ಬದ್ರಿ ಬಿ ಜೇಕಬ್ ಓರಮ್  01

ರವಿ ರಾಂಪಾಲ್ ಔಟಾಗದೆ 01

ಇತರೆ (ಲೆಗ್‌ಬೈ-2, ವೈಡ್-6, ನೋಬಾಲ್-2) 1 0

ವಿಕೆಟ್ ಪತನ: 1-14 (ಚಾರ್ಲ್ಸ್; 1.5); 2-36 (ರಸೆಲ್; 3.5); 3-61 (ಗೇಲ್; 6.2); 4-87 (ಸ್ಯಾಮುಯೆಲ್; 10.4); 5-98 (ಬ್ರಾವೊ; 12.5); 6-102 (ರಾಮ್ದಿನ್; 13.2); 7-123 (ಸಮಿ; 16.6); 8-133 (ಪೊಲಾರ್ಡ್; 17.5); 9-136 (ಸುನಿಲ್; 18.3); 10-139 (ಬದ್ರಿ; 19.3)

ಬೌಲಿಂಗ್: ಕೈಲ್ ಮಿಲ್ಸ್ 2-0-25-0 (ನೋಬಾಲ್-1), ಡಗ್ ಬ್ರೇಸ್‌ವೆಲ್ 4-0-31-3, ಟಿಮ್ ಸೌಥಿ 4-0-21-3 (ವೈಡ್-2), ಜೇಕಬ್ ಓರಮ್ 1.3-0-17-1 (ನೋಬಾಲ್-1, ವೈಡ್-1), ರೋನಿ ಹೀರಾ 4-0-24-1 (ವೈಡ್-2), ನೇಥನ್ ಮೆಕ್ಲಮ್ 4-0-19-2

ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139

ರಾಬ್ ನಿಕೋಲ್ ಎಲ್‌ಬಿಡಬ್ಲ್ಯು ಬಿ ರವಿ ರಾಂಪಾಲ್  03

ಮಾರ್ಟಿನ್ ಗುಪ್ಟಿಲ್ ಸಿ ಸ್ಯಾಮುಯೆಲ್ಸ್ ಬಿ ಡರೆನ್ ಸಮಿ  21

ಬ್ರೆಂಡನ್ ಮೆಕ್ಲಮ್ ಬಿ ಸ್ಯಾಮುಯೆಲ್ ಬದ್ರಿ  22

ರಾಸ್ ಟೇಲರ್ ಔಟಾಗದೆ  62

ಜೇಮ್ಸ ಫ್ರಾಂಕ್ಲಿನ್ ಸಿ ಕ್ರಿಸ್ ಗೇಲ್ ಬಿ ಸುನಿಲ್ ನಾರಾಯಣ್  14

ಜೇಕಬ್ ಓರಮ್ ಎಲ್‌ಬಿಡಬ್ಲ್ಯು ಬಿ ಸುನಿಲ್ ನಾರಾಯಣ್  06

ನೇಥನ್ ಮೆಕ್ಲಮ್ ಸಿ ಚಾರ್ಲ್ಸ್ ಬಿ ಸುನಿಲ್ ನಾರಾಯಣ್  05

ಡಗ್ ಬ್ರೇಸ್‌ವೆಲ್ ರನ್‌ಔಟ್ (ಸಬ್ ಡರೆನ್ ಸ್ಮಿತ್ )  01

ಇತರೆ (ಲೆಗ್‌ಬೈ-2, ವೈಡ್-2, ನೋಬಾಲ್-1)  05

ವಿಕೆಟ್ ಪತನ: 1-8 (ನಿಕೋಲ್; 2.2); 2-41 (ಬಿ.ಮೆಕ್ಲಮ್; 7.2); 3-52 (ಗುಪ್ಟಿಲ್; 8.6); 4-85 (ಫ್ರಾಂಕ್ಲಿನ್; 12.6); 5-115 (ಓರಮ್; 16.4); 6-125 (ಎನ್.ಮೆಕ್ಲಮ್; 18.3); 7-139 (ಬ್ರೇಸ್‌ವೆಲ್; 19.6)

ಬೌಲಿಂಗ್: ರವಿ ರಾಂಪಾಲ್ 4-0-23-1, ಸ್ಯಾಮುಯೆಲ್ ಬದ್ರಿ 4-0-18-1, ಸುನಿಲ್ ನಾರಾಯಣ್ 4-0-20-3 (ನೋಬಾಲ್-1), ಡರೆನ್ ಸಮಿ 4-0-35-1 (ವೈಡ್-1), ಕೀರನ್ ಪೊಲಾರ್ಡ್ 2-0-13-0, ಕ್ರಿಸ್ ಗೇಲ್ 1-0-15-0, ಮಾರ್ಲನ್ ಸ್ಯಾಮುಯೆಲ್ಸ್ 1-0-13-0 (ವೈಡ್-1).

ಫಲಿತಾಂಶ: ಪಂದ್ಯ ಟೈ. ಸೂಪರ್ ಓವರ್‌ನಲ್ಲಿ ವೆಸ್ಟ್‌ಇಂಡೀಸ್‌ಗೆ ಗೆಲುವು ಹಾಗೂ 2 ಪಾಯಿಂಟ್. ಪಂದ್ಯ ಶ್ರೇಷ್ಠ: ಸುನಿಲ್ ನಾರಾಯಣ್.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry