ವಿಂಡೀಸ್ ವಿರುದ್ಧ ಮೂರು ಟೆಸ್ಟ್ ಆಡಲಿರುವ ಭಾರತ

7

ವಿಂಡೀಸ್ ವಿರುದ್ಧ ಮೂರು ಟೆಸ್ಟ್ ಆಡಲಿರುವ ಭಾರತ

Published:
Updated:

ಮುಂಬೈ (ಪಿಟಿಐ): ಭಾರತ ಪ್ರವಾಸ ಕೈಗೊಳ್ಳಲಿರುವ ವೆಸ್ಟ್ ಇಂಡೀಸ್ ತಂಡವು ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ಮಹೇಂದ್ರ ಸಿಂಗ್ ದೋನಿ ಪಡೆಯು ಕೆರಿಬಿಯನ್ನರ ವಿರುದ್ಧ ಮೊದಲು ಟೆಸ್ಟ್ ಆನಂತರ ಏಕದಿನ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಪ್ರಥಮ ಟೆಸ್ಟ್ ನವೆಂಬರ್ 6 ರಂದು ನವದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ನಂತರದ ಎರಡು ಟೆಸ್ಟ್‌ಗಳು ಕೋಲ್ಕತ್ತ (ನ.14-18) ಹಾಗೂ ಮುಂಬೈ (ನ.22-26)ನಲ್ಲಿ ನಡೆಯಲಿವೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry