ವಿಂಡ್ಸರ್‌ನಲ್ಲಿ ಚೈನೀಸ್

7

ವಿಂಡ್ಸರ್‌ನಲ್ಲಿ ಚೈನೀಸ್

Published:
Updated:

ಚೀನಿ ಖಾದ್ಯಗಳು ವಿಶ್ವದೆಲ್ಲೆಡೆ ಅಪಾರ ಜನಮನ್ನಣೆ ಪಡೆದುಕೊಂಡಿವೆ. ಭಾರತದಲ್ಲೂ ಚೀನಿ ಖಾದ್ಯಕ್ಕೆ ಮನಸೋತವರ ಸಂಖ್ಯೆ ಯಥೇಚ್ಛ. ನೂಡಲ್ಸ್, ಸೂಪ್‌ಗಳಂತೂ ಜನಪ್ರಿಯ.ಇಂಥ ಡ್ರ್ಯಾಗನ್ ಲ್ಯಾಂಡ್‌ನ ಬಗೆಬಗೆಯ ಅಪರೂಪದ ತಿನಿಸುಗಳ ರುಚಿಯನ್ನು ಬೆಂಗಳೂರಿಗರಿಗೆ ಉಣಬಡಿಸಲು ಸ್ಯಾಂಕಿ ರಸ್ತೆಯ ಐಟಿಸಿ ವಿಂಡ್ಸರ್‌ನ ರಾಜ್ ಪೆವಿಲಿಯನ್‌ನಲ್ಲಿ ಭಾನುವಾರದ ವರೆಗೆ ಚೀನಿ ಆಹಾರ ಉತ್ಸವ ನಡೆಯುತ್ತಿದೆ. ಚೀನಿ ಆಹಾರದಲ್ಲಿ ನುರಿತ ಖ್ಯಾತ ಶೆಫ್‌ಗಳಾದ ಲೀ ಪೆಂಗ್ ಮತ್ತು ನಿಯಾನ್ ಕ್ವಿಂಗ್ ಅವರು ಅಲ್ಲಿನ ವಿವಿಧ ಪ್ರಾಂತದ ಸಾಂಪ್ರದಾಯಿಕ ಅಪರೂಪದ ತಿನಿಸಿನ ರುಚಿಯನ್ನು ಪರಿಚಯಿಸುತ್ತಿದ್ದಾರೆ.ಪೀಕಿಂಗ್ ಡಕ್, ಟಿಯಾನ್‌ಫು ವಿಧಾನದಲ್ಲಿ ಲ್ಯಾಂಬ್ ಶಾಂಕ್, ಸಿಚೌನ್ ಮಾಪೋ ಟೋಫೊ, ರೋಸ್ಟೆಡ್ ಚಿಕನ್, ಬೀಜಿಂಗ್ ಗ್ರೀಲ್ಡ್ ಪ್ರಾನ್ಸ್ ಮೊದಲಾದವನ್ನು ಸವಿಯಬಹುದು. ಆದರೆ ಈ ಉತ್ಸವ ರಾತ್ರಿ ಭೋಜನಕ್ಕೆ ಮಾತ್ರ ಸೀಮಿತ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry