ವಿ.ಎಸ್.ಆಚಾರ್ಯ ಬದುಕಿನ ಹಾದಿ

7

ವಿ.ಎಸ್.ಆಚಾರ್ಯ ಬದುಕಿನ ಹಾದಿ

Published:
Updated:

ಕಟ್ಟೆ ಶ್ರೀನಿವಾಸ ಹಾಗೂ ಕೃಷ್ಣವೇಣಿ ಅಮ್ಮ ದಂಪತಿ ಪುತ್ರರಾಗಿ ಉಡುಪಿಯಲ್ಲಿ 1939ರಲ್ಲಿ ವೇದವ್ಯಾಸ ಶ್ರೀನಿವಾಸ (ವಿ.ಎಸ್.) ಆಚಾರ್ಯ ಜನನ.ಉಡುಪಿ ಹಾಗೂ ಕರಾವಳಿ ಭಾಗದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಕಳೆದ 4  ದಶಕಗಳಿಂದ ಸಕ್ರಿಯವಾಗಿರುವ ಡಾ. ಆಚಾರ್ಯ, ವೃತ್ತಿಯಲ್ಲಿ ವೈದ್ಯ-  ಪ್ರವೃತ್ತಿಯಲ್ಲಿ ರಾಜಕಾರಣಿ.ಡಾ. ವಿ.ಎಸ್.ಆಚಾರ್ಯ ಎಂದೇ ಚಿರಪರಿಚಿತ. ಜನರಿಂದ ನೇರ ಆಯ್ಕೆಯಾಗಿ ಹೆಚ್ಚು ರಾಜಕೀಯ ನಡೆಸದಿದ್ದರೂ, ವಿಧಾನ ಪರಿಷತ್ ಸದಸ್ಯರಾಗಿ ಅನುಭವಿ ಎನಿಸಿಕೊಂಡವರು. ಉಡುಪಿ ಪುರಸಭೆ ಸದಸ್ಯ, ಅಧ್ಯಕ್ಷರಾಗಿ ರಾಜಕೀಯ ಆರಂಭಿಸಿದ ಈ ವೈದ್ಯ ನಾಲ್ಕು ದಶಕಗಳ ಸುದೀರ್ಘ ಅನುಭವ, ಪಕ್ಷ ನಿಷ್ಠೆ ಅವರನ್ನು ಬಿಜೆಪಿ ಸರ್ಕಾರದಲ್ಲಿ ವಿವಿಧ ಸಚಿವ ಪದವಿಗಳನ್ನು ದೊರಕಿಸಿಕೊಟ್ಟಿತ್ತು.* ಪೂರ್ಣ ಹೆಸರು: ವೇದವ್ಯಾಸ ಶ್ರೀನಿವಾಸ ಆಚಾರ್ಯ* ಜನನ: 6 ಜುಲೈ 1939, ಉಡುಪಿ* ತಂದೆ: ಕಟ್ಟೆ ಶ್ರೀನಿವಾಸ ಆಚಾರ್ಯ, ತಾಯಿ ಕೃಷ್ಣವೇಣಿ ಅಮ್ಮ* ವಿದ್ಯಾರ್ಹತೆ: ಬಿಎಸ್‌ಸಿ, ಎಂಬಿಬಿಎಸ್.* ಪತ್ನಿ: ಶಾಂತಾ ವಿ.ಆಚಾರ್ಯ* ಮಕ್ಕಳು: ನಾಲ್ವರು ಪುತ್ರರು-ಡಾ. ರವಿರಾಜ ಆಚಾರ್ಯ, ಡಾ. ಕಿರಣ್ ವಿ. ಆಚಾರ್ಯ (ಕೆಎಂಸಿಯಲ್ಲಿ

ವೈದ್ಯರು.), ಗಣೇಶ್ ಪ್ರಸಾದ್, ರಾಜೇಶ್ ಪ್ರಸಾದ್ (ಎಂಜಿನಿಯರ್, ಅಮೆರಿಕ)ಪುತ್ರಿ-ಭಾರತಿ ಹೆಬ್ಬಾರ್ (ಪತಿ ಮೋಹನ್ ಹೆಬ್ಬಾರ್, ಅಮೆರಿಕ)* 1959ರಲ್ಲಿ ಮಣಿಪಾಲ ಕೆಎಂಸಿ ವೈದ್ಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ.* 1968ರಲ್ಲಿ ಉಡುಪಿ ಪುರಸಭೆ ಅಧ್ಯಕ್ಷ. ಆಗ ಅವರಿಗೆ 28 ವರ್ಷ.* 1974 -77ರವರೆಗೆ ಭಾರತೀಯ ಜನಸಂಘ ಜಿಲ್ಲಾ ಅಧ್ಯಕ್ಷ* 1975-77 ತುರ್ತು ಪರಿಸ್ಥಿತಿ-19 ತಿಂಗಳ ಸೆರೆವಾಸ.* 1977-83 ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ* 1983- ಉಡುಪಿ ವಿಧಾನಸಭಾಕ್ಷೇತ್ರದಿಂದ ಆಯ್ಕೆ.* 1984 - ಬಿಜೆಪಿ ರಾಜ್ಯ ಉಪಾಧ್ಯಕ್ಷ. ಮುಂದಿನ 20 ವರ್ಷಗಳವರೆಗೆ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ನೇಮಕ.* 1996-ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ.* 2002-ಉಡುಪಿ ಜಿಲ್ಲೆ ರಚನೆ. ವಿಧಾನಪರಿಷತ್ ಸದಸ್ಯರಾಗಿ ಮರು ಆಯ್ಕೆ.* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕುರಿತ ಸದನ ಸಮಿತಿ ಅಧ್ಯಕ್ಷ.* 2006-ವೈದ್ಯಕೀಯ ಶಿಕ್ಷಣ ಸಚಿವ.* 2008-ಗೃಹ ಸಚಿವ.* 2010-ಹೆಚ್ಚುವರಿಯಾಗಿ ಮುಜರಾಯಿ ಇಲಾಖೆ* 2010(ಸೆ)-ಉನ್ನತ ಶಿಕ್ಷಣ ಸಚಿವ.* 2010(ಡಿ)-ಹೆಚ್ಚುವರಿಯಾಗಿ ಮಾಹಿತಿ ತಂತ್ರಜ್ಞಾನ/ಜೈವಿಕ ತಂತ್ರಜ್ಞಾನ.* 2012-ಫೆ. 14 ,ನಿಧನ (ಬೆಂಗಳೂರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry