`ವಿಕಿಪೀಡಿಯದಲ್ಲಿ ಮಾಹಿತಿ: ಸ್ತ್ರೀಯರ ಪಾತ್ರ ಇರಲಿ'

7

`ವಿಕಿಪೀಡಿಯದಲ್ಲಿ ಮಾಹಿತಿ: ಸ್ತ್ರೀಯರ ಪಾತ್ರ ಇರಲಿ'

Published:
Updated:

ಬೆಂಗಳೂರು:  `ವಿಕಿಪೀಡಿಯದಂತಹ ವೆಬ್‌ಸೈಟ್‌ನಲ್ಲಿ ಪೂರಕ ಮಾಹಿತಿ ಅಳವಡಿಕೆಯ ಕಾರ್ಯದಲ್ಲಿ ಮಹಿಳೆಯರು ಹೆಚ್ಚಿನ ಪಾಲು ಪಡೆಯುವ ಅಗತ್ಯವಿದೆ' ಎಂದು ವಿಕಿಪೀಡಿಯ ಮಾಹಿತಿ ಅನುವಾದಕ ಓಂ ಶಿವಪ್ರಕಾಶ್ ತಿಳಿಸಿದರು.

ಸರ್ವೆಲಾಟ್ಸ್ ಇನ್‌ಫೋಟೆಕ್ ಸಂಸ್ಥೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ `ವಿಕಿಪೀಡಿಯದಲ್ಲಿ ಮಹಿಳೆಯರು' ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.`ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಅಂತೆಯೇ ವಿಕಿಪೀಡಿಯ ವೆಬ್‌ಸೈಟ್‌ನಲ್ಲಿ ಸರಣಿ ಮಾಹಿತಿ ಸೇರ್ಪಡೆ ಮತ್ತು ಪೂರಕ ಅಂಶಗಳನ್ನು ತಿದ್ದುವ ಕಾರ್ಯದಲ್ಲೂ ಹೆಚ್ಚಿನ ಆಸಕ್ತಿ ತಳೆಯಬೇಕು. ಇದರಿಂದ ವೆಬ್‌ಸೈಟ್‌ನಲ್ಲಿ ಮಹಿಳಾ ಜಗತ್ತು ತೆರೆದುಕೊಳ್ಳಲು ಸಾಧ್ಯವಿದೆ' ಎಂದು ಅಭಿಪ್ರಾಯಪಟ್ಟರು.`ವಿಕಿಪೀಡಿಯದಲ್ಲಿ ಯಾವುದೇ ಮಾಹಿತಿಯನ್ನು ತಿದ್ದುವ ಮತ್ತು ಅದಕ್ಕೆ ಪೂರಕವಾಗಿ ಸೇರ್ಪಡೆಗೊಳಿಸಲು ಸಾಧ್ಯವಿದೆ. ಮಾಹಿತಿಗಾಗಿ ಅತಿ ಹೆಚ್ಚು ಜನರು ತಡಕಾಡಿರುವ ವೆಬ್‌ಸೈಟ್‌ನಲ್ಲಿ ವಿಕಿಪೀಡಿಯ ಐದನೇ ಸ್ಥಾನದಲ್ಲಿದೆ. ನಿರ್ದಿಷ್ಟ ವಿಷಯವನ್ನು ಆಯ್ಕೆ ಮಾಡಿಕೊಂಡು ಸ್ಥಳೀಯ ಭಾಷೆಗಳಲ್ಲಿ ಮಾಹಿತಿಯನ್ನು ನೀಡಬಹುದು' ಎಂದು ಹೇಳಿದರು.`ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಮಾಹಿತಿಯನ್ನು ತಿದ್ದುವ ಮತ್ತು ಸೇರ್ಪಡೆಗೊಳಿಸುವ ಕಾರ್ಯ ಮಾಡಬಹುದು. ಅದೆಲ್ಲವೂ ಕೂಡ ದಾಖಲಾಗುತ್ತಾ ಹೋಗುತ್ತದೆ. ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವುದರಿಂದ ಜ್ಞಾನವಿಸ್ತಾರಕ್ಕೆ ಹೆಚ್ಚಿನ ಅವಕಾಶ ನೀಡಿದಂತಾಗುತ್ತದೆ' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry