ವಿಕಿರಣ ಭೀತಿ: ಮಕ್ಕಳ ತೆರವಿಗೆ ಸಲಹೆ

ಶನಿವಾರ, ಜೂಲೈ 20, 2019
24 °C

ವಿಕಿರಣ ಭೀತಿ: ಮಕ್ಕಳ ತೆರವಿಗೆ ಸಲಹೆ

Published:
Updated:

ಟೋಕಿಯೊ (ಎಎಫ್‌ಪಿ): ಫುಕುಶಿಮಾದ ಪರಮಾಣು ಘಟಕದಿಂದ ಸುಮಾರು 60 ಕಿಮೀವರೆಗಿನ(40 ಮೈಲಿಗಳು) ಪ್ರದೇಶದಲ್ಲಿರುವ ಪಟ್ಟಣದಿಂದ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರನ್ನು ತೆರವುಗೊಳಿಸಬೇಕು. ಇಲ್ಲಿದಿದ್ದಲ್ಲಿ ವಿಕಿರಣ ತೀವ್ರತೆಯ ಪ್ರಭಾವ ಇವರ ಮೇಲಾಗುವ ಸಾಧ್ಯತೆ ಇದೆ ಎಂದು ಗ್ರೀನ್‌ಪೀಸ್ ಸಂಘಟನೆ ಜಪಾನ್‌ಗೆ ಎಚ್ಚರಿಕೆ ನೀಡಿದೆ.ಫುಕುಶಿಮಾ ಪಟ್ಟಣದ ಬಗ್ಗೆ ತನ್ನ ಅಂಕಿ ಅಂಶಗಳು ಸರ್ಕಾರದ ಅಂಕಿ ಅಂಶಗಳನ್ನು ಬಹುತೇಕ ಹೋಲುತ್ತದೆ. ಆದರೆ ವಿಶೇಷವಾಗಿ ಮಕ್ಕಳ ಆರೋಗ್ಯಕ್ಕೆ ಎದುರಾಗಿರುವ ಭೀತಿಗೆ ಸಂಬಂಧಿಸಿದಂತೆ ವಿಭಿನ್ನ ಅಭಿಪ್ರಾಯಗಳು ಇವೆ ಎಂದು ಪರಿಸರವಾದಿ ಮತ್ತು ಪರಮಾಣು ವಿರೋಧಿ ಸಂಘಟನೆ ಗ್ರೀನ್ ಪೀಸ್ ಮುಖ್ಯಸ್ಥ ಕುಮಿ ನೈಡೂ ಅವರು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry