ವಿಕಿರಣ ಸೋರಿಕೆ

7

ವಿಕಿರಣ ಸೋರಿಕೆ

Published:
Updated:

ಟೋಕಿಯೊ (ಎಪಿ): ಫುಕುಶಿಮಾ ಪರಮಾಣು ಸ್ಥಾವರದ ಘಟಕದಿಂದ ವಿಕಿರಣ ಸೋರಿಕೆ ಉಂಟಾಗಿ ನೀರು ಕಲುಷಿತಗೊಂಡಿರುವುದರಿಂದ ಆತಂಕಕ್ಕೆ ಒಳಗಾಗಿರುವ ಜಪಾನಿನ ಪರಮಾಣು ನಿಯಂತ್ರಣ ಸಂಸ್ಥೆಯು, ತರಾತುರಿಯಲ್ಲಿ ದಾಸ್ತಾನು ತೊಟ್ಟಿಯನ್ನು ನಿರ್ಮಿಸಿರುವುದೇ ಸೋರಿಕೆಗೆ ಕಾರಣ ಎಂದು ಹೇಳಿದೆ.ದಾಸ್ತಾನು ತೊಟ್ಟಿಗೆ ಸಂಪರ್ಕ ಕಲ್ಪಿಸುವ ಪೈಪ್‌ನಲ್ಲಿ ಕಳೆದ ವಾರ ಸೋರಿಕೆ ಕಂಡುಬಂದಿದೆ.ಪರಮಾಣು ಘಟಕದ ಬಳಿ ನೀರಿನಲ್ಲಿ ವಿಕಿರಣ ಪ್ರಮಾಣ ಜಾಸ್ತಿ ಕಂಡುಬಂದಿರುವುದರಿಂದ ದಾಸ್ತಾನು ತೊಟ್ಟಿಯಲ್ಲೂ ಸೋರಿಕೆಯಾಗುತ್ತಿರಬಹುದು ಎಂದು ಶಂಕಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry