ಶುಕ್ರವಾರ, ಮೇ 27, 2022
22 °C

ವಿಕಿರಣ ಸೋರಿಕೆ ಭಾರತಕ್ಕೆ ಅಪಾಯಇಲ್ಲ- ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಜಪಾನಿನ ಫುಕುಶಿಮಾ ಪರಮಾಣು ಘಟಕದಲ್ಲಿ ವಿಕಿರಣ ಸೋರಿಕೆಯಾಗುತ್ತಿರುವುದರಿಂದ ಭಾರತದ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗಿಲ್ಲ ಎಂದು ಭಾರತೀಯ ಪರಮಾಣು ಇಂಧನ ನಿಯಂತ್ರಣ ಮಂಡಳಿ (ಎಇಆರ್‌ಬಿ) ಶುಕ್ರವಾರ ಸ್ಪಷ್ಟಪಡಿಸಿದೆ.ಫುಕುಶಿಮಾದಲ್ಲಿ ಸ್ಫೋಟ ಉಂಟಾಗಿ ವಿಕಿರಣ ಹರಡಲು ಆರಂಭವಾದಂದಿನಿಂದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಭಾರತೀಯ ಪರಿಸರ ವಿಕರಣ ಪರಿಶೀಲನಾ ಜಾಲದ ಅಂಕಿಂಶಗಳನ್ನು ಸತತವಾಗಿ ಪರಿಶೀಲಿಸಲಾಗುತ್ತಿದೆ ಎಇಆರ್‌ಬಿ ಕಾರ್ಯದರ್ಶಿ ಆರ್. ಭಟ್ಟಾಚಾರ್ಯ ತಿಳಿಸಿದ್ದಾರೆ.ದೇಶದ 28 ಸ್ಥಳಗಳಲ್ಲಿ ಅಣು ವಿಕಿರಣ ಪ್ರಮಾಣವನ್ನು ಅಳೆಯಲಾಗುತ್ತಿದ್ದು ಆನ್‌ಲೈನ್‌ನಲ್ಲಿ ಅಂಕಿಅಂಶಗಳು ಲಭ್ಯ ಇವೆ. ಇದುವರೆಗೆ ಯಾವುದೇ ಸ್ಥಳದಲ್ಲಿ ವಿಕಿರಣ ಇರುವುದು ಕಂಡುಬಂದಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.