ಭಾನುವಾರ, ಆಗಸ್ಟ್ 1, 2021
21 °C

ವಿಕಿಲೀಕ್ಸ್ ಶ್ಲಾಘಿಸಿದ ಅಡ್ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಎಐಎನ್‌ಎಸ್), ವಿಕಿಲೀಕ್ಸ್ ಸಂಸ್ಥಾಪಕ ಜೂಲಿಯಾನ್ ಅಸಾಂಜ್ ಮತ್ತು ಫೇಸ್ ಬುಕ್ ನಿರ್ಮಾಪಕ ಮಾರ್ಕ್ ಝುಕೆರ್ಬರ್ಗ್ ಕಾರ್ಯವನ್ನು  ಬಿಜೆಪಿ ಮುಖಂಡ ಎಲ್. ಕೆ. ಅಡ್ವಾಣಿ ಶ್ಲಾಘಿಸಿದ್ದಾರೆ.

ಈಚೆಗೆ ತಮ್ಮ ಬ್ಲಾಗ್‌ನಲ್ಲಿ ಇದನ್ನು ಪ್ರಕಟಿಸಿರುವ ಅವರು, ಇವೆರಡು ಎಲ್ಲರನ್ನೂ ಮೀರಿಸುವ ಕೆಲಸ ಮಾಡಿವೆ ಎಂದಿದ್ದಾರೆ.‘ವಿಜ್ಞಾನ ಕ್ಷೇತ್ರದಲ್ಲಿ ಗಾಲಿಚಕ್ರ, ವಿದ್ಯುಚ್ಛಕ್ತಿ ಮತ್ತು ವಿಮಾನ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆಗಳು ಆಗಿವೆ. ಆದರೆ ಇದು ಇಂಟರ್ನೆಟ್ ಸೇವೆಗೆ ಸಾಟಿಯಿಲ್ಲ’ ಎಂದು ಕೊಂಡಾಡಿದ್ದಾರೆ.ಅಧಿಕಾರವು ರಾಜ್ಯಗಳಿಂದ ಹಣ ಕಾಸು ಕ್ಷೇತ್ರಕ್ಕೆ, ಹಣಕಾಸು ಕ್ಷೇತ್ರದಿಂದ ಜ್ಞಾನ ಕ್ಷೇತ್ರಕ್ಕೆ ಸ್ಥಳಾಂತರವಾಗುತ್ತಿದೆ ಎಂದು ಅಲ್ವಿನ್ ಟಾಫ್ಲರ್ ಬರೆದ ಪ್ರಬಂಧ ಉಲ್ಲೇಖಿಸಿ ಅಡ್ವಾಣಿ  ಬರೆದಿದ್ದಾರೆ. ಈಜಿಪ್ಟ್‌ನಲ್ಲಿ ಪ್ರಜಾ ಪ್ರಭುತ್ವ ಸ್ಥಾಪನೆಯಲ್ಲಿ ‘ಗೂಗಲ್’ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಅವರು ಶ್ಲಾಘಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.