ಗುರುವಾರ , ಮೇ 6, 2021
32 °C

ವಿ.ಕೆ.ಸಿಂಗ್ ಜನ್ಮ ದಿನಾಂಕ: ಸರ್ಕಾರದ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಹುಟ್ಟಿದ ದಿನಾಂಕ ಮೇ 10, 1950 ಎಂಬುದನ್ನು ಪುಷ್ಟೀಕರಿಸುವ ಕನಿಷ್ಠ ಐದು ದಾಖಲೆಗಳು ಇವೆ ಎಂದು ಸರ್ಕಾರ ಹೇಳಿದೆ.ಸಿಂಗ್ ಅವರು ಕಮಿಷನ್ಡ್ ಅಧಿಕಾರಿಯಾಗಿ ನೇಮಕಗೊಂಡ ಸಂದರ್ಭದಲ್ಲಿ ನೀಡಿರುವ ದಾಖಲೆಯಲ್ಲೂ ಇದೇ ದಿನಾಂಕ ನಮೂದಾಗಿದೆ ಎಂದು ಅಟಾರ್ನಿ ಜನರಲ್ ಅವರು ರಕ್ಷಣಾ ಸಚಿವಾಲಯಕ್ಕೆ ತಿಳಿಸಿದ್ದಾರೆ.ಸಿಂಗ್ ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿದಂತೆ ಸರ್ಕಾರದ ದಾಖಲೆಗಳಲ್ಲಿ ಎರಡು ಬೇರೆ ಬೇರೆ ದಿನಾಂಕಗಳ ದಾಖಲೆಗಳು ಇವೆ. ಕೆಲವು ಸಂದರ್ಭಗಳಲ್ಲಿ ಮೇ 10, 1950 ಎಂಬುದು ನಮೂದಾಗಿದ್ದರೆ ಇನ್ನು ಕೆಲವು ವೇಳೆ ಮೇ 10, 1951 ಎಂಬ ದಾಖಲೆಯನ್ನು ಅವರು ಸಲ್ಲಿಸಿದ್ದಾರೆ. ಈ ಎರಡರ ಪೈಕಿ ಸರ್ಕಾರ ಮೇ 10, 1950ರ ದಾಖಲೆಯನ್ನೇ ನಿಜವಾದ ವಯಸ್ಸೆಂದು ಪರಿಗಣಿಸಲು ನಿರ್ಧರಿಸಿದೆ. ಆದರೆ ಸಿಂಗ್ 1951ರ ದಿನಾಂಕವನ್ನು ನಿಜವಾದ ದಾಖಲೆ ಎಂದು ಪರಿಗಣಿಸಲು ರಕ್ಷಣಾ ಸಚಿವಾಲಯವನ್ನು ಕೋರಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.