ಶುಕ್ರವಾರ, ಮೇ 14, 2021
32 °C

ವಿ.ಕೆ.ಸಿಂಗ್ ಹೊಸ ತಗಾದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಜನ್ಮದಿನಾಂಕ ವಿವಾದ, ಪ್ರಧಾನಿಗೆ ಬರೆದ ರಹಸ್ಯ ಪತ್ರ ಸೋರಿಕೆ ಪ್ರಕರಣಗಳಿಂದ ಭಾರಿ ಸುದ್ದಿಯಲ್ಲಿದ್ದ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಇದೀಗ ಮತ್ತೊಮ್ಮೆ ಹೊಸ ವಿವಾದಕ್ಕೆ ಕಾರಣರಾಗಿದ್ದಾರೆ.ಶಿಮ್ಲಾದಲ್ಲಿ ಕ್ರೀಡಾಂಗಣ ಸ್ವಾಧೀನ ವಿಷಯಕ್ಕೆ ಸಂಬಂಧಿಸಿದಂತೆ ಅವರು, ತಮ್ಮ ಹಿರಿಯ ಸಹೋದ್ಯೋಗಿ ಜ. ಆರ್.ಆರ್.ಘೋಷ್ ಅವರೊಂದಿಗೆ ಸಂಘರ್ಷಕ್ಕಿಳಿದಿದ್ದಾರೆ.ಪಶ್ಚಿಮ ಕಮಾಂಡ್ ಮುಖ್ಯಸ್ಥ ಘೋಷ್ ಅವರು, ಕ್ರೀಡಾಂಗಣ ಸ್ವಾಧೀನ ವಿಷಯದಲ್ಲಿ ಹಿಮಾಚಲ ಪ್ರದೇಶ ಸರ್ಕಾರ ಹಾಗೂ ಮುಖ್ಯಮಂತ್ರಿ ಪಿ.ಕೆ.ಧುಮಾಲ್ ಅವರಿಗೆ ಕಳಂಕ ತರುತ್ತಿದ್ದಾರೆ ಎನ್ನುವುದು ಸಿಂಗ್ ಅವರ ಆರೋಪ.ವಿವಾದಿತ ಅನ್ನಂದಳೆ ಮೈದಾನವು ಸರ್ಕಾರಕ್ಕೆ ಸೇರಿದ್ದಾದರೂ 1941ರಿಂದಲೂ ಸೇನೆಯ ವಶದಲ್ಲಿದೆ. ಇದೀಗ ಸರ್ಕಾರ ಇಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಉದ್ದೇಶಿಸಿದೆ. `ಆಟಕ್ಕಾಗಿ ರಾಷ್ಟ್ರೀಯ ಭದ್ರತೆಯನ್ನು ಕಡೆಗಣಿಸಲಾಗದು~ ಎಂದು ಪಶ್ಚಿಮ ಕಮಾಂಡ್ ಪತ್ರಿಕಾ ಹೇಳಿಕೆ ನೀಡಿತ್ತು.ಈ ನಡುವೆ ಧುಮಾಲ್ ಅವರು ಈ ವಿಷಯವನ್ನು ಪ್ರಧಾನಿ ಅವರ ಗಮನಕ್ಕೆ ತಂದಿದ್ದು, ಶೀಘ್ರವೇ ಈ ಬಗ್ಗೆ ದೂರು ನೀಡಲು ರಕ್ಷಣಾ ಸಚಿವ ಎ.ಕೆ.ಆಂಟನಿ ಅವರನ್ನು ಭೇಟಿಯಾಗುವುದಾಗಿಯೂ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.