ಶನಿವಾರ, ನವೆಂಬರ್ 16, 2019
21 °C

ವಿಕೊ ಲ್ಯಾಬೊರೇಟರೀಸ್‌ಗೆ `ಉದ್ಯೋಗ ರತ್ನ' ಪ್ರಶಸ್ತಿ

Published:
Updated:

ಬೆಂಗಳೂರು: ಗ್ರಾಹಕ ಬಳಕೆಯ ಆಯುರ್ವೇದ ಉತ್ಪನ್ನಗಳನ್ನು ತಯಾರಿಸುವ `ವಿಕೊ ಲ್ಯಾಬೊರೇಟರೀಸ್'ಗೆ ರಾಷ್ಟ್ರೀಯ ಶಿಕ್ಷಣ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ `ರಾಷ್ಟ್ರೀಯ ಉದ್ಯೋಗ ರತ್ನ' ಪ್ರಶಸ್ತಿ ಸಂದಿದೆ.  ಇತ್ತೀಚೆಗೆ ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ `ವಿಕೊ ಲ್ಯಾಬೊರೇಟರೀಸ್' ಅಧ್ಯಕ್ಷ ಗಜಾನನ ರಾವ್ ಪೆಂಢಾರ್ಕರ್, `ಕಾಕತಾಳೀಯ ಎಂಬಂತೆ ಕಂಪೆನಿಯ ವಜ್ರ ಮಹೋತ್ಸವ ಸಂದರ್ಭದಲ್ಲಿಯೇ ಈ ಪ್ರಶಸ್ತಿ ಬಂದಿದೆ' ಎಂದು ಸಂತಸ ವ್ಯಕ್ತಪಡಿಸಿದ್ದರೆಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)