ಭಾನುವಾರ, ಜೂನ್ 20, 2021
21 °C

ವಿಕ್ರಂ ಆಸ್ಪತ್ರೆ: ಹೃದಯ ಚಿಕಿತ್ಸೆಗೆ ಸಾಲ ಸೌಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಗರದ ವಿಕ್ರಂ ಆಸ್ಪತ್ರೆಯು ಹೃದಯದ ಚಿಕಿತ್ಸೆ­ಯಲ್ಲಿ ಬಳಸುವ ದುಬಾರಿ ಬೆಲೆಯ ಸಲಕರ­ಣೆಗಳ ಖರೀ­ದಿ­­ಗಾಗಿ ಬಡವರಿಗೆ ಸಾಲ ಸೌಲಭ್ಯ ಒದಗಿಸುವ ‘ಆರೋಗ್ಯ­ವಂತ ಹೃದಯ ಎಲ್ಲರಿಗಾಗಿ’ ಎಂಬ ಯೋಜನೆ­ ಮೆಡ್‌­ಟ್ರಾನಿಕ್ಸ್‌ ಇಂಡಿಯಾ ಸಂಸ್ಥೆಯ ಸಹಯೋಗ­ದಲ್ಲಿ ಆರಂಭಿಸಿದೆ.ಆಸ್ಪತ್ರೆಯ ಉಪಾಧ್ಯಕ್ಷ ಮಿಲಿಂದ್‌ ಶಾ ಹಾಗೂ ಕಾರ್ಯ­ನಿರ್ವಾ­ಹಕ ನಿರ್ದೇಶಕ ಸುಧೀರ್‌ ಪೈ ಪತ್ರಿಕಾ ಗೋಷ್ಠಿಯಲ್ಲಿ ಶುಕ್ರವಾರ ಈ ಮಾಹಿತಿ ನೀಡಿದರು.‘ಹೃದಯದ ಚಿಕಿತ್ಸೆಗೆ ಅಗತ್ಯವಾದ ಪೇಸ್‌ ಮೇಕರ್‌, ಐಸಿಡಿ, ಸಿಆರ್‌ಟಿಪಿ ಮತ್ತಿತರ ಸಲಕರಣೆಗಳು ದುಬಾರಿ­ಯಾ­ಗಿವೆ. ಅವುಗಳನ್ನು ಖರೀದಿಸಲಾಗದೆ ಹಲವರು ಚಿಕಿತ್ಸೆಯನ್ನೇ ಮುಂದೂಡುತ್ತಾರೆ. ರೋಗಿಗಳು ಸಕಾಲದಲ್ಲಿ ಚಿಕಿತ್ಸೆ ಪಡೆ­ಯಲು ಈ ಯೋಜನೆ ಆರಂಭಿಸಲಾಗಿದೆ’ ಎಂದರು.‘ಹೃದಯದಲ್ಲಿ ಅಳವಡಿಸಲು ಬೇಕಾದ ಸಲಕರಣೆಗಳ ಖರೀದಿಗೆ ಸಿಗುವ ಸಾಲದ ಸೌಲಭ್ಯ ಕುರಿತು ರೋಗಿಗಳಿಗೆ ಮಾಹಿತಿ ನೀಡಲಾಗುತ್ತದೆ. ಸಾಲ ಪಡೆಯುವ ಪ್ರಕ್ರಿಯೆ ಸರಳ­ವಾಗಿದ್ದು, ಆಸ್ಪತ್ರೆ ಸಿಬ್ಬಂದಿಯಿಂದ ಅಗತ್ಯ ಮಾರ್ಗದರ್ಶನ ಕೊಡಿಸಲಾಗುತ್ತದೆ’ ಎಂದು ತಿಳಿಸಿದರು.ಆಸ್ಪತ್ರೆಯ ಹಿರಿಯ ಹೃದ್ರೋಗ ತಜ್ಞ ಡಾ. ಪಿ. ರಂಗನಾಥ ನಾಯಕ್‌ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.