ಭಾನುವಾರ, ಮಾರ್ಚ್ 7, 2021
19 °C

ವಿಕ್ರಾಂತ್‌ ಈಗ ನಿರ್ಮಾಪಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಕ್ರಾಂತ್‌ ಈಗ ನಿರ್ಮಾಪಕ

‘35 ಎಂಎಂ’ ಕಿರುಚಿತ್ರದ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ನಟ ವಿಕ್ರಾಂತ್‌ ಮೆಸ್ಸಿ ತಮ್ಮ ಈ ಹೊಸ ಹೆಜ್ಜೆಗೆ ರಿತೇಶ್ ಸಿದ್ವಾನಿ ಅವರೇ ಪ್ರೇರಣೆ ಎಂದು ಹೇಳಿಕೊಂಡಿದ್ದಾರೆ. ‘ದಿಲ್‌ ಧಡಕ್ನೇ ದೊ’ ಚಿತ್ರದಲ್ಲಿ ರಿತೇಶ್‌ ಜೊತೆ ಸೇರಿ ಕೆಲಸ ಮಾಡುವಾಗ ಸಾಕಷ್ಟು ಕೆಲಸಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು ಎಂದೂ ಅವರು ತಿಳಿಸಿದ್ದಾರೆ.‘ಒಂದು ಚಿತ್ರದ ನಿರ್ಮಾಣ ಕಾರ್ಯ ಹೇಗೆಲ್ಲ ನಡೆಯುತ್ತದೆ, ನಿರ್ಮಾಣ ತಂಡದ ಹೊಣೆಗಾರಿಕೆಗಳೇನು ಎನ್ನುವ ಸೂಕ್ಷ್ಮಗಳನ್ನು ನಾನು ರಿತೇಶ್‌ ಅವರ ಕಾರ್ಯವೈಖರಿ ನೋಡಿಯೇ ತಿಳಿದುಕೊಂಡಿದ್ದು’ ಎಂದಿದ್ದಾರೆ ವಿಕ್ರಾಂತ್‌.‘ನಾನು ನಿರ್ಮಾಪಕನಾಗಲು ಪ್ರೇರಣೆ ನೀಡಿದ್ದು ಅವರೇ. ಈ ಬಗ್ಗೆ ನನಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಆದರೆ ಸರಿಯಾದ ಮಾರ್ಗ ಗೊತ್ತಿರಲಿಲ್ಲ. ದಿಲ್‌ ಧಡಕ್ನೇ ದೊ ಚಿತ್ರದಲ್ಲಿ ರಿತೇಶ್‌ ಅವರ ಜೊತೆ ಕೆಲಸ ಮಾಡುತ್ತ, ಅವರನ್ನು ಅನುಸರಿಸುತ್ತ ಹೋದೆ.ಅಲ್ಲಿಯೇ ಸಾಕಷ್ಟು ಸಂಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಯಿತು. ಆಗಲೇ ನನ್ನ ದಾರಿ ನನಗೆ ಮತ್ತಷ್ಟು ಸ್ಪಷ್ಟವಾಗಿ ಗೋಚರಿಸಿತು’ ಎಂದು ಅವರು  ಹೇಳಿದ್ದಾರೆ. ‘ರಿತೇಶ್ ಬುದ್ಧಿಮತ್ತೆಯುಳ್ಳ ಉದ್ಯಮಿ ಅಷ್ಟೇ ಅಲ್ಲ, ಅವರೊಬ್ಬ ಸಂಭಾವಿತ ಸ್ನೇಹಜೀವಿಯೂ ಹೌದು’  ಶ್ಲಾಘಿಸಿದ್ದಾರೆ ವಿಕ್ರಾಂತ್‌ .

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.