ವಿಘಟನೆ

7
ಮಾಡಿ ನಲಿ ಸರಣಿ -30

ವಿಘಟನೆ

Published:
Updated:
ವಿಘಟನೆ

ಸಾಮಗ್ರಿ:

ಬ್ರೆಡ್, ಕಾಗದ, ಬಾಳೆ ಹಣ್ಣಿನ ಸಿಪ್ಪೆ, ಪ್ಲಾಸ್ಟಿಕ್, ತಗ್ಗು ತೆಗೆಯಲು ಹರಿತವಾದ ಕಬ್ಬಿಣದ ಸಲಾಕೆ.

ವಿಧಾನ

1. ನಿಮ್ಮ ಮನೆ/ ಶಾಲೆಯ ಅಂಗಳದಲ್ಲಿ 15 ಸೆ.ಮೀ. ಆಳದ ನಾಲ್ಕು ಚಿಕ್ಕ ತಗ್ಗುಗಳನ್ನು ತೋಡಿ.

2. ಮೊದಲ ತಗ್ಗಿನಲ್ಲಿ ಒಂದು ತುಂಡು ಬ್ರೆಡ್ಡು, ಎರಡನೆಯ ತಗ್ಗಿನಲ್ಲಿ ಒಂದು ಕಾಗದದ ತುಂಡನ್ನು, ಮೂರನೆಯ ತಗ್ಗಿನಲ್ಲಿ ಬಾಳೆಹಣ್ಣಿನ ಸಿಪ್ಪೆಯ ತುಂಡನ್ನು ಹಾಗೂ ನಾಲ್ಕನೆಯ ತಗ್ಗಿನಲ್ಲಿ ಒಂದು ಪ್ಲಾಸ್ಟಿಕ್ ತುಂಡನ್ನು ಹಾಕಿ ಮಣ್ಣಿನಿಂದ ಮುಚ್ಚಿ.

3. 8-10 ದಿನಗಳಾದ ನಂತರ ಅವುಗಳನ್ನು ತಗ್ಗಿನಿಂದ ಹೊರತೆಗೆದು ಪರೀಕ್ಷಿಸಿ.

ಪ್ರಶ್ನೆ

ಆ ಎಲ್ಲ ವಸ್ತುಗಳಿಗೆ ಏನಾಗಿದೆ? ಯಾಕೆ?

ಉತ್ತರ

ಬ್ರೆಡ್ಡು ಹಾಗೂ ಬಾಳೆಹಣ್ಣಿನ ಸಿಪ್ಪೆಯ ತುಂಡುಗಳು ಜೈವಿಕವಾಗಿ ವಿಘಟನೆ ಆಗಿರುತ್ತವೆ. ಕಾಗದ ಅಲ್ಲಲ್ಲಿ ವಿಘಟನೆ ಆಗಿರುತ್ತದೆ. ಆದರೆ ಪ್ಲಾಸ್ಟಿಕ್ ಮಾತ್ರ ವಿಘಟನೆಯಾಗದೆ ಹಾಗೇ ಉಳಿದಿರುತ್ತದೆ. ಜೈವಿಕ ವಸ್ತುಗಳು ವಿಘಟನೆ ಆಗುತ್ತವೆ. ಪ್ಲಾಸ್ಟಿಕ್ ಹಾಗೂ ಡಿ.ಡಿ.ಟಿ.ಯಂತಹ ವಸ್ತುಗಳು ವಿಘಟನೆಯಾಗದೆ ಹಾಗೆಯೇ ನಿಸರ್ಗದಲ್ಲಿ ಬಹಳ ದಿವಸಗಳವರೆಗೆ ಉಳಿಯುತ್ತವೆ. ಆದ್ದರಿಂದ ಜೈವಿಕವಾಗಿ ವಿಘಟನೆಯಾಗದ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry