ಶುಕ್ರವಾರ, ಮೇ 14, 2021
29 °C

ವಿಚಕ್ಷಣ ದಳದ ಬಲೆಗೆ ಡಿಪೊ ಮ್ಯಾನೇಜರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ಚಾಲಕ ಕಂ ನಿರ್ವಾಹಕರೊಬ್ಬರ ರಜೆ ಮಂಜೂರಾತಿಗೆ ರೂ 500 ಲಂಚ ಪಡೆಯುತ್ತಿದ್ದ ಪಟ್ಟಣದ ಕೆಎಸ್‌ಆರ್‌ಟಿಸಿ ಘಟಕ ವ್ಯವಸ್ಥಾಪಕ ನಟರಾಜ ಬುಧವಾರ ರಾತ್ರಿ ಸಂಸ್ಥೆಯ ಭದ್ರತಾ ಮತ್ತು ಜಾಗೃತ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.ಪತ್ನಿಯ ಅನಾರೋಗ್ಯ ನಿಮಿತ್ತ ಚಾಲಕ ಕಂ ನಿರ್ವಾಹಕ ಸತೀಶ್ ಒಂದು ವಾರ ರಜೆ ಹಾಕಿದ್ದರು. ರಜೆ ಮಂಜೂರಾತಿಗೆ ತಕ್ಷಣಕ್ಕೆ ರೂ 500 ಹಾಗೂ ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ರೂ 200 ಮಾಮೂಲಿ ನೀಡಬೇಕೆಂದು ಪೀಡಿಸುತ್ತಿದ್ದರು. ಡಿಪೊ ವ್ಯವಸ್ಥಾಪಕರ ವರ್ತನೆಯಿಂದ ಬೇಸತ್ತ ಸತೀಶ್ ಜಾಗೃತ ದಳಕ್ಕೆ ದೂರು ನೀಡಿದ್ದರು.ದೂರಿನ ಮೇರೆಗೆ ಕಾರ್ಯ ಪ್ರವೃತ್ತರಾದ ಸಂಸ್ಥೆಯ ಜಾಗೃತ ದಳದ ಅಧಿಕಾರಿ ಶಿವಪ್ರಕಾಶ್ ಮತ್ತು ತುಮಕೂರಿನ ಭದ್ರತಾಧಿಕಾರಿ ಲಕ್ಷ್ಮಣ್, ಕುಣಿಗಲ್ ಡಿಪೊದ ಮ್ಯಾನೇಜರ್ ಕಚೇರಿಯಲ್ಲಿಯೇ ನಟರಾಜ್ ಲಂಚ ಸ್ವೀಕರಿಸುವಾಗ ದಾಳಿ ನಡೆಸಿ, ಲಂಚದ ಹಣ ವಶಪಡಿಸಿಕೊಂಡು, ಪ್ರಕರಣ ದಾಖಲಿಸಿದರು.ರಾತ್ರಿ ಬಹುತೇಕ ಚಾಲಕ ನಿರ್ವಾಹಕರು ಕರ್ತವ್ಯ ಮುಗಿಸಿ ಮನೆಗೆ ತೆರಳುವ ವೇಳೆ ದಾಳಿ ನಡೆಯಿತು. ವ್ಯವಸ್ಥಾಪಕರ ವಿರುದ್ಧ ಡಿಪೊ ಸಿಬ್ಬಂದಿ ಹಲವು ದೂರುಗಳನ್ನು ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳವಂತೆ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.