ಸೋಮವಾರ, ಮೇ 17, 2021
22 °C

ವಿಚಾರಣೆ ನಡೆಸಿದ ರಕ್ಷಣಾ ಸ್ಥಾಯಿ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಭಾರತದ ಸೇನಾ ಪಡೆಯ ಎರಡು ತುಕಡಿಗಳು ಜ.16-17ರ ಮಧ್ಯರಾತ್ರಿ ರಾಜಧಾನಿ ನವದೆಹಲಿಯೆಡೆಗೆ ಶಂಕಾಸ್ಪದವಾಗಿ ಧಾವಿಸುತ್ತಿದ್ದವು~ ಎಂಬ ಮಾಧ್ಯಮದ ವರದಿಯ ಹಿನ್ನೆಲೆಯಲ್ಲಿ ಸಂಸತ್ತಿನ ರಕ್ಷಣಾ ಸ್ಥಾಯಿ ಸಮಿತಿಯು ಬುಧವಾರ ರಕ್ಷಣಾ ಕಾರ್ಯದರ್ಶಿ ಶಶಿಕಾಂತ್ ಶರ್ಮ ಮತ್ತು ಸೇನಾ ಉಪ ಮುಖ್ಯಸ್ಥ ಎಸ್.ಕೆ.ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.ಸ್ಥಾಯಿ ಸಮಿತಿ ಮುಂದೆ ಹಾಜರಾದ ಶರ್ಮ ಮತ್ತು ಸಿಂಗ್, ಸಶಸ್ತ್ರ ಪಡೆಗಳ ಸನ್ನದ್ಧತೆ ಖಾತ್ರಿಗೊಳಿಸಿಕೊಳ್ಳಲು ತುಕಡಿಗಳು ಹೀಗೆ ಒಂದೆಡೆಯಿಂದ ಮತ್ತೊಂದೆಡೆಗೆ ಧಾವಿಸುವುದು ಸಾಮಾನ್ಯ ಎಂದು ಸಮರ್ಥಿಸಿಕೊಂಡಿದ್ದಾರೆ.ಸೇನಾ ಇಲಾಖೆಗೆ ಸಂಬಂಧಿಸಿದ ಇತ್ತೀಚಿನ ಪ್ರಕರಣವಾದ ಟಟ್ರಾ ಟ್ರಕ್ ಖರೀದಿ ಲಂಚ ಆಮಿಷ ಸೇರಿದಂತೆ ಹಲವು ವಿವಾದಗಳ ಬಗ್ಗೆಯೂ ಸ್ಥಾಯಿ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ವಿಚಾರಿಸಿದರು.ಸಮಿತಿ ಅಧ್ಯಕ್ಷ ಸತ್ಪಾಲ್ ಮಹಾರಾಜ್ ಅವರು ಶರ್ಮ ಮತ್ತು ಸಿಂಗ್ ಇಬ್ಬರಿಗೂ ಏ.9ರಂದು ಸಮಿತಿ ಮುಂದೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಸೂಚಿಸಿದರು.ಎಐಎಂಐಎಂ ಸದಸ್ಯ ಅಸಾದುದ್ದೀನ್ ಒವಾಯಿಸಿ, ಬಿಜೆಪಿಯ ಮುಖ್ತಾರ್ ಅಬ್ಬಾಸ್ ನಕ್ವಿ ಮತ್ತು ಆರ್‌ಜೆಡಿಯ ರಾಮಕೃಪಾಲ್ ಯಾದವ್ ಸಮಿತಿಯಲ್ಲಿ ಈ ಕುರಿತು ಪ್ರಸ್ತಾಪಿಸಿದರು.ಇದು ಆಡಳಿತ ಹಾಗೂ ಸೇನೆಯ ನಡುವಿನ ಸಂಬಂಧಕ್ಕೆ  ಸಂಬಂಧಪಟ್ಟ  ವಿಷಯವಾದ್ದರಿಂದ ಇಂತಹ ವರದಿಗಳು ಜನರಲ್ಲಿ ದಿಗಿಲು ಹುಟ್ಟಿಸುತ್ತವೆ ಎಂದು ಹಲವು ಸದಸ್ಯರು ಅಭಿಪ್ರಾಯಪಟ್ಟರು.ಇಂತಹ ವರದಿಗಳು ವಿದೇಶಗಳಿಗೆ ನಮ್ಮ ಬಗ್ಗೆ ತಪ್ಪು ಸಂದೇಶ ರವಾನಿಸುತ್ತವೆ ಎಂದು ಇನ್ನು ಕೆಲವು ಸದಸ್ಯರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.