ಮಂಗಳವಾರ, ಮೇ 11, 2021
20 °C
26/11ಮುಂಬೈ ದಾಳಿ ಪ್ರಕರಣ

ವಿಚಾರಣೆ ಮುಂದೂಡಿದ ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಮುಂಬೈ ಮೇಲಿನ 26/11ರ ಅಮಾನುಷ ದಾಳಿಯ ಏಳು ಪಾಕಿಸ್ತಾನಿ ಆರೋಪಿಗಳ ವಿಚಾರಣೆಯನ್ನು ಪಾಕ್ ನ್ಯಾಯಾಲಯ ಶನಿವಾರ ಮುಂದೂಡಿದೆ. ವಿಚಾರಣೆ ನಡೆಸಬೇಕಿದ್ದ ನ್ಯಾಯಾಧೀಶ ಕೌಸರ್ ಅಬ್ಬಾಸ್ ಜೈದಿ ಅವರು ರಜೆಯಿಂದಾಗಿ ಗೈರು ಹಾಜರಾಗಿದ್ದು ಈ ಮುಂದೂಡಿಕೆಗೆ ಕಾರಣ.

ಕೌಸರ್ ಜೈದಿ ಅವರು ಜೂನ್ 29ರಂದು ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಕಳೆದ ವಾರದವರೆಗೂ, ರಾವಲ್ಪಿಂಡಿಯ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಈ ಪ್ರಕರಣದ ವಿಚಾರಣೆ ನಡೆಸುತ್ತಿತ್ತು. ಈಗ ಅದನ್ನು ಇಸ್ಲಾಮಾಬಾದ್‌ನಲ್ಲಿ ಸ್ಥಾಪಿಸಲಾಗಿರುವ ಹೊಸ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ. 2009ರಿಂದ ಈಚೆಗೆ ಈ ಪ್ರಕರಣದ ವಿಚಾರಣೆಗೆ ನಿಯೋಜಿತರಾಗಿದ್ದ ಐವರು ನ್ಯಾಯಾಧೀಶರು ಬದಲಾಗಿದ್ದಾರೆ.ಎಫ್‌ಐಎ ದ ಚೌಧರಿ ಜುಲ್ಫಿಕರ್ ಅಲಿ ಅವರು ಮೇ ತಿಂಗಳವರೆಗೂ ಈ ಪ್ರಕರಣದ ಮುಖ್ಯ ಪ್ರಾಸಿಕ್ಯೂಟರ್ ಆಗಿದ್ದರು. ಇಸ್ಲಾಮಾಬಾದ್‌ನಲ್ಲಿ ಉಗ್ರರ ದಾಳಿಗೆ ಮೇ 3ರಂದು ಅವರು ಬಲಿಯಾದ ನಂತರ ಆ ಸ್ಥಾನ ಖಾಲಿ ಉಳಿದಿದೆ. ಮುಂಬೈ ಪ್ರಕರಣದ ವಿಚಾರಣೆಯನ್ನು ಈ ಮುನ್ನ 2009ರಿಂದಲೂ ರಾವಲ್ಪಿಂಡಿಯ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವೇ ನಡೆಸುತ್ತಿತ್ತು.

ಆದರೆ ಈ ಅವಧಿಯಲ್ಲಿ ಐವರು “ನ್ಯಾಯಾಧೀಶರ ಬದಲಾವಣೆ ಆಗಿದೆ. ಮುಂಬೈ ದಾಳಿ ಪ್ರಕರಣದಲ್ಲಿ ಲಷ್ಕರ್-ಎ-ತೈಯಬಾ ಕಮಾಂಡರ್ ಜಕೀವುರ್ ರೆಹಮಾನ್ ಲಖ್ವಿ ಕೂಡ ಏಳು ಆರೋಪಿಗಳ ಪೈಕಿ ಒಬ್ಬನಾಗಿದ್ದಾನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.