ಶನಿವಾರ, ಮಾರ್ಚ್ 6, 2021
19 °C

ವಿಚ್ಛೇದನ ಕೋರಿ ಅಮಲಾ ಪೌಲ್ ದಂಪತಿ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಚ್ಛೇದನ ಕೋರಿ ಅಮಲಾ ಪೌಲ್ ದಂಪತಿ ಅರ್ಜಿ

ಚೆನ್ನೈ (ಪಿಟಿಐ): ನಟಿ ಅಮಲಾ ಪೌಲ್‌ ಹಾಗೂ ಅವರ ಪತಿ ಚಲನಚಿತ್ರ ನಿರ್ದೇಶಕ ಎ.ವಿಜಯ್ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ.ಪ್ರಧಾನ ಕೌಟುಂಬಿಕ ನ್ಯಾಯಾಧೀಶೆ ಮರಿಯಾ ಕ್ಲೇಟ್ ಅವರ ಮುಂದೆ ಹಾಜರಾದ ದಂಪತಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13 (ಬಿ) ಅಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು.ದಂಪತಿ ಯಾವುದೇ ಪರಿಹಾರ ಕೋರಿಲ್ಲ ಎಂದು ತಿಳಿದು ಬಂದಿದೆ. 2014ರ ಜೂನ್ 12ರಂದು ಅಮಲಾ ಪೌಲ್ ಮತ್ತು ವಿಜಯ್ ವಿವಾಹವಾಗಿದ್ದು, 2015ರ ಮಾರ್ಚ್ 3ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.‘ವೀರಶೇಖರನ್’ ತಮಿಳು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅಮಲಾ, ವಿಕ್ರಂ, ವಿಜಯ್ ಸೇರಿದಂತೆ ಹಲವು ನಟರೊಂದಿಗೆ ಅಭಿನಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.