ಗುರುವಾರ , ಜೂನ್ 17, 2021
23 °C

ವಿಚ್ಛೇದನದ ಮದುವೆಗೆ ವೃಥಾ ಖರ್ಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತ್ತೀಚಿನ ವರ್ಷಗಳಲ್ಲಿ ಮದುವೆ ವಿಚ್ಛೇದನ ಪ್ರಮಾಣ ಹೆಚ್ಚಾಗಿದೆ. ಅದ್ಧೂರಿಯಾಗಿ, ಶಾಸ್ತ್ರ ಸಮ್ಮತವಾಗಿ ನಡೆದ ಗಣ್ಯರ ಮನೆಯ ಮದುವೆಗಳೂ ಮುರಿದು ಬೀಳುತ್ತಿವೆ. ನ್ಯಾಯಾಲಯದಲ್ಲಿ ವಿಚ್ಛೇದನದ ಮೂಲಕ ಅಂತ್ಯ ಕಾಣುತ್ತಿವೆ.

ರಾಜ್ಯದಲ್ಲಿ 2011ರಲ್ಲಿ 4500 ವಿಚ್ಛೇದನ ಪ್ರಕರಣಗಳು ದಾಖಲಾಗಿವೆ. ಯಾರ ಗಮನಕ್ಕೂ ಬಾರದ ಮುರಿದ ಮದುವೆಗಳ ಸಂಖ್ಯೆ ಎಷ್ಟು ಸಾವಿರ ಇರಬಹುದು? ಪ್ರತಿ ದಿನ 18 ಫಿರ್ಯಾದಿಗಳು ದಾಖಲಾಗುತ್ತವೆ ಎಂಬ ಮಾಹಿತಿ ಇದೆ. ಇವು ಅಂತ್ಯ ಕಾಣಲು ಎಷ್ಟು ವರ್ಷ ಬೇಕೋ ದೇವರೇ ಬಲ್ಲ. ಅಲ್ಲಿಯವರೆಗೆ ಈ ಗಂಡು ಹೆಣ್ಣುಗಳ ಗತಿ ಏನು?

ಮದುವೆ ಮುರಿದು ಹೋಗಲಿ ಎಂದು ಯಾರೂ ಬಯಸುವುದಿಲ್ಲ. ಮುರಿದು ಹೋಗುವ ಮದುವೆಗಳಿಗೆ ಅದ್ಧೂರಿತನ ಬೇಕೆ ಎಂಬ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ! ದುಬಾರಿ ಛತ್ರಗಳು, ಇಂದ್ರನ ಅಮರಾವತಿಯ ವೈಭವ ಮೀರಿಸುವ  ದೀಪಾಲಂಕಾರ, ಹೂವುಗಳ ಮಂಟಪ, ಭಾರೀ ಭೋಜನ ಎಲ್ಲವೂ ವೃಥಾ ಖರ್ಚು.

ತಮ್ಮ ಐಶ್ವರ್ಯದ ಪ್ರದರ್ಶನ ಮಾಡಲು ಇಂತಹ ಮದುವೆಗಳಿಗೆ ಬರುವ ಜನರ ಪರೋಕ್ಷ ಖರ್ಚುಗಳು ಇನ್ನೆಷ್ಟು? ಮುರಿದು ಹೋಗುವ ಮದುವೆಗಳಿಗೆ ಇಷ್ಟೆಲ್ಲ ಖರ್ಚು ಮಾಡಬೇಕೆ? ಈ ಬಗ್ಗೆ ಯಾರೂ ಯೋಚಿಸುತ್ತಿಲ್ಲವೇಕೆ? ಪ್ರಜ್ಞಾವಂತರು ಈ ಕುರಿತು ಮಾರ್ಗದರ್ಶನ ಮಾಡುವರೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.