ವಿಚ್ಛೇದಿತ ಮಹಿಳೆಗೆ ಆಸ್ತಿಯಲ್ಲಿ ಪಾಲು

7

ವಿಚ್ಛೇದಿತ ಮಹಿಳೆಗೆ ಆಸ್ತಿಯಲ್ಲಿ ಪಾಲು

Published:
Updated:

ನವದೆಹಲಿ (ಪಿಟಿಐ): ವಿಚ್ಛೇದಿತ ಮಹಿಳೆಗೆ ಪತಿಯ ಸ್ಥಿರಾಸ್ತಿಯಲ್ಲಿ ಕಡ್ಡಾಯವಾಗಿ ಪಾಲು ನೀಡುವ ದಿಸೆಯಲ್ಲಿ ವಿವಾಹ ಕಾಯ್ದೆ ಮಸೂದೆಗೆ ಅಗತ್ಯ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ಸೂಚಿಸಿದೆ.ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರವೂ ದಂಪತಿ ರಾಜಿಯಾಗಲು ನೀಡಲಾಗುತ್ತಿದ್ದ ಆರು ತಿಂಗಳ ಕಡ್ಡಾಯ ಕಾಲಾವಕಾಶ ನಿಯಮವನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗಿದೆ.

 

ಒಂದು ವೇಳೆ ಈ ಕಾಲಾವಕಾಶ ಕಡಿತಗೊಳಿಸಲು ಬಯಸುವ ದಂಪತಿ ಒಟ್ಟಿಗೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬೇಕಿರುವುದು ಕಡ್ಡಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry