ಸೋಮವಾರ, ನವೆಂಬರ್ 18, 2019
25 °C

ವಿಜಯಕಾಂತ್ ನ್ಯಾಯಾಲಯಕ್ಕೆ ಶರಣು

Published:
Updated:
ವಿಜಯಕಾಂತ್ ನ್ಯಾಯಾಲಯಕ್ಕೆ ಶರಣು

ತಿರುವಣ್ಣಾಮಲೈ (ಪಿಟಿಐ): ಇಲ್ಲಿನ ಸ್ಥಳೀಯ ನ್ಯಾಯಾಲಯದ ಜಾಮೀನು ರಹಿತ ಬಂಧನ ವಾರೆಂಟ್ ಎದುರಿಸುತ್ತಿರುವ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ  ನಾಯಕ, ಎಂಡಿಕೆ ಸ್ಥಾಪಕ ವಿಜಯಕಾಂತ್ ಅವರು ಗುರುವಾರ ನ್ಯಾಯಾಲಯಕ್ಕೆ ಶರಣಾದರು.

ಜಯಲಲಿತಾ ಸರ್ಕಾರವು ವಿಜಯಕಾಂತ್ ಅವರ ವಿರುದ್ಧ ಮಾನನಷ್ಟ ಪ್ರಕರಣವನ್ನು ದಾಖಲೆ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಕಾಂತ್ ಅವರ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್‌ನ್ನು ಜಾರಿಗೊಳಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶೆ ಕಮಲಾವತಿ ಅವರು ವಿಜಯಕಾಂತ್ ಅವರಿಗೆ ನ್ಯಾಯಾಲಯದಲ್ಲಿ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದ್ದರು. ಆದರೆ, ವಿಜಯಕಾಂತ್ ಅವರು ನ್ಯಾಯಾಲಯಕ್ಕೆ ಹಾಜರಾಗುವಲ್ಲಿ ವಿಫಲರಾಗಿದ್ದರು.ವಿಜಯಕಾಂತ್ ಅವರಿಗೆ ಬುಧವಾರ ಜಾಮೀನು ರಹಿತ ವಾರೆಂಟ್‌ನ್ನು ಜಾರಿಗೊಳಿಸಲಾಗಿತ್ತು.ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 5ಕ್ಕೆ ಮುಂದೂಡಲಾಗಿದೆ.

ಪ್ರತಿಕ್ರಿಯಿಸಿ (+)