ವಿಜಯಕುಮಾರಿಗೆ ಪ್ರಶಸ್ತಿ ‘ಡಬಲ್‌’

7
ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

ವಿಜಯಕುಮಾರಿಗೆ ಪ್ರಶಸ್ತಿ ‘ಡಬಲ್‌’

Published:
Updated:

ಬೆಂಗಳೂರು: ಕೆಂಗೇರಿಯಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರ ದಕ್ಷಿಣ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ಸಲೀಮ್‌ ಷೇಕ್‌ ಮತ್ತು ಜಿ.ಕೆ.ವಿಜಯ ಕುಮಾರಿ ಅವರು ಬೆಂಗಳೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ­ದಲ್ಲಿ ಪ್ರಶಸ್ತಿ ಡಬಲ್‌ ಪಡೆದ ಗೌರವಕ್ಕೆ ಪಾತ್ರರಾದರು.ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ 100 ಮೀಟರ್ಸ್‌ ಓಟದ ಪುರುಷರ ವಿಭಾಗದಲ್ಲಿ ಚಿನ್ನ ಗೆದ್ದ ಸಲೀಮ್‌, 200 ಮೀಟರ್ಸ್‌­ನಲ್ಲಿಯೂ ಮೊದಲಿಗರಾಗಿ ಗುರಿ ತಲುಪಿದರು. ಮಹಿಳಾ ವಿಭಾಗದ 200 ಮೀಟರ್ಸ್‌ ಮತ್ತು 400 ಮೀಟರ್ಸ್‌ ಸ್ಪರ್ಧೆಗಳೆರಡರಲ್ಲಿಯೂ ವಿಜಯ ಕುಮಾರಿ ಮೊದಲಿಗರಾಗಿ ಗುರಿ ತಲುಪಿದರು.ಡಿಸ್ಕಸ್‌ ಮತ್ತು ಶಾಟ್‌ಪಟ್‌ ಎಸೆತದ ಸ್ಪರ್ಧೆಗಳೆ­ರಡರಲ್ಲಿಯೂ  ವೈಎಸ್‌ಸಿಯ ಶೀತಲ್‌ ಕುಮಾರ್‌ ಬಂಗಾರದ ಸಾಮರ್ಥ್ಯ ತೋರಿದರು.

ಪುರುಷರ 400 ಮೀಟರ್ಸ್‌ನಲ್ಲಿ ಡಿವೈ­ಎಸ್‌ಎಸ್‌ನ ಕೆ.ಎಸ್‌.ಜೀವನ್‌, 800 ಮೀಟರ್ಸ್‌ನಲ್ಲಿ ಡಿವೈಎಸ್‌ಎಸ್‌ನ ಪುಟ್ಟರಾಜು, 1,500ಮೀಟರ್ಸ್‌ನಲ್ಲಿ ಯುವ ಬೆಂಗಳೂರಿನ ಎನ್‌.ವಿನಯ್‌, 3000ಮೀಟರ್ಸ್‌ನಲ್ಲಿ ರೈಲ್ವೆಯ ಎಂ.ಜೆ.ಬಸವರಾಜು, ಹೈಜಂಪ್‌ನಲ್ಲಿ ಬೆಂಗಳೂರು ಸ್ಪೋರ್ಟ್ಸ ಕ್ಲಬ್‌ನ ಎಸ್‌.ಹರ್ಷಿತ್‌, ಟ್ರಿಪಲ್‌ಜಂಪ್‌ನಲ್ಲಿ ಡಿವೈಎಸ್‌ಎಸ್‌ನ ಸೂರಜ್‌ ಮಂಡಲ್‌, ಜಾವಲಿನ್‌ ಎಸೆತದಲ್ಲಿ ರೈಲ್ವೆಯ ಶರತ್‌ರಾಜ್‌ ಚಿನ್ನ ಗೆದ್ದರು.ಮಹಿಳಾ ವಿಭಾಗದ 100 ಮೀಟರ್ಸ್‌ ಓಟದಲ್ಲಿ ಕೆನರಾ ಬ್ಯಾಕ್‌ನ ಎಚ್‌.ಎಂ.­ಜ್ಯೋತಿ ಚಿನ್ನ ಗೆದ್ದರೆ, 800 ಮೀ. ಓಟದಲ್ಲಿ ಫ್ಯೂಷನ್‌ ಕ್ಲಬ್‌ನ ಆರ್‌.ಮಹಾಲಕ್ಷಿ್ಮ ಮೊದಲಿಗರಾಗಿ ಗುರಿ ತಲುಪಿದರು.1500ಮೀ. ಓಟದಲ್ಲಿ ರೈಲ್ವೆಯ ಕೆ.ಸಿ.ಶ್ರುತಿ, 5000ಮೀ. ಓಟದಲ್ಲಿ ಎಂ.ಇ.ಎಸ್‌.ಕಾಲೇಜಿನ ವಿ.ಹೇಮಾ, ಹೈಜಂಪ್‌ನಲ್ಲಿ ಎಲ್‌.ಐ.ಸಿ.ಯ ಹರ್ಷಿಣಿ ಕುಮಾರಿ, ಟ್ರಿಪಲ್‌ ಜಂಪ್‌ನಲ್ಲಿ  ಎಲ್‌.ಐ.ಸಿ.ಯ ಜಾಯ್‌­ಲಿನ್‌ ಲೋಬೊ, ಜಾವಲಿನ್‌ ಎಸೆತ­ದಲ್ಲಿ ಕೆನರಾ ಬ್ಯಾಂಕ್‌ನ ಸುಜಾತಾ ನಾಯಕ್‌, ಡಿಸ್ಕಸ್‌ ಎಸೆತದಲ್ಲಿ ಮೌಂಟ್‌ ಕಾರ್ಮೆಲ್‌ ಕಾಲೇಜಿನ ಅಮೃತಾ ಶೆಟ್ಟಿ, ಶಾಟ್‌ಪಟ್‌ನಲ್ಲಿ ವೈಎಸ್‌ಸಿಯ ನಿವೇದಿತಾ ಅಗ್ರಸ್ಥಾನ ಗಳಿಸಿದರು.ಕೆಎಸ್‌ಪಿಗೆ ಹಾಕಿ ಪ್ರಶಸ್ತಿ

ಕರ್ನಾಟಕ ರಾಜ್ಯ ಪೊಲೀಸ್‌ ತಂಡದವರು ಬೆಂಗಳೂರು ನಗರ ವಿಭಾಗ ಮಟ್ಟದ ದಸರಾ ಕ್ರೀಡಾ ಕೂಟದ ಹಾಕಿ ಟೂರ್ನಿಯ ಪುರುಷರ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.ಡಿವೈಎಸ್‌ಎಸ್‌ ತಂಡದವರು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಆದರೆ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಡಿವೈಎಸ್‌ಎಸ್‌ ಆಟಗಾರ್ತಿಯರೇ ಗೆದ್ದು ಕೊಂಡರು.ಬ್ಯಾಸ್ಕೆಟ್‌ಬಾಲ್‌ನ ಪುರುಷರ ವಿಭಾಗದಲ್ಲಿ ಕೆಎಸ್‌ಪಿ ಮತ್ತು ಡಿವೈಎಸ್‌ಎಸ್‌ ಕ್ರಮವಾಗಿ ಮೊದಲ ಎರಡು ಸ್ಥಾನ ಗಳಿಸಿದರೆ, ಮಹಿಳಾ ವಿಭಾಗದಲ್ಲಿ ಮೌಂಟ್ಸ್‌ ಕ್ಲಬ್‌ ಮತ್ತು ಎಸ್‌ಎಸ್‌ವಿ ತಂಡಗಳು ಮೊದಲ ಎರಡು ಸ್ಥಾನ ಪಡೆದವು.ಬಾಲ್‌ಬ್ಯಾಡ್ಮಿಂಟನ್‌ನ ಮಹಿಳಾ ವಿಭಾಗದಲ್ಲಿ  ಎನ್‌ಎಂಕೆಆರ್‌ವಿ ಕಾಲೇಜು ಮತ್ತು ಜಯಾ ಸ್ಪೋರ್ಟ್ಸ್ ಕ್ಲಬ್‌ ತಂಡದವರು ಕ್ರಮವಾಗಿ ಮೊದಲ ಎರಡು ಸ್ಥಾನ ಗಳಿಸಿದರು. ಪುರುಷರ ವಿಭಾಗದಲ್ಲಿ ಸಹ್ಯಾದ್ರಿ ಮತ್ತು ಬನಶಂಕರಿ ಕ್ಲಬ್‌ ತಂಡದವರು ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry