ಮಂಗಳವಾರ, ಏಪ್ರಿಲ್ 20, 2021
25 °C

ವಿಜಯದಶಮಿಗೆ ಬಿನ್ನಿ ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾವಗಡ: ವಿಜಯದಶಮಿ ವಿಜಯೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ಆಕರ್ಷಕವಾಗಿ ನಡೆಯಿತು.

ವೇಣುಗೋಪಾಲ ಸ್ವಾಮಿ ದೇವಾಲಯ ಬಳಿಯಿಂದ ಗ್ರಾಮ ದೇವತೆಗಳೊಂದಿಗೆ ಹೊರಟ ಮೆರವಣಿಗೆಯಲ್ಲಿ ತಹಶೀಲ್ದಾರ್ ಜಿ.ಎಸ್.ಪ್ರಸನ್ನಕುಮಾರ್, ಪುರಸಭೆ ಅಧ್ಯಕ್ಷ ಗುರಪ್ಪ ಇತರರು ಭಾಗವಹಿಸಿದ್ದರು. ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಮರಕ್ಕೆ ಅಂಬು ಹೊಡೆದು ತಾಲ್ಲೂಕಿನಲ್ಲಿ ಮಳೆ ಬೆಳೆ ಸಂವೃದ್ಧಿಯಾಗುವಂತೆ ಕೋರಿ ಪೂಜೆ ಸಲ್ಲಿಸಿದರು.ಗ್ರಾಮ ದೇವತೆಗಳಾದ ಮಾರಮ್ಮ, ವೇಣುಗೋಪಾಲಸ್ವಾಮಿ, ಶನಿಶ್ವರ ಸ್ವಾಮಿ, ಕಾಳಮ್ಮ, ಸಪಲಮ್ಮ, ಮುತ್ಯಾಲಮ್ಮ, ವಾಸವಿ ದೇವತೆಗಳು ಭಾಗವಹಿಸಿದ್ದವು. ಪಾಲ್ಗೊಂಡ ಜನರು ಬನ್ನಿ ಪತ್ರೆಯನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ದಸರ ಶುಭಾಶಯ ವಿನಿಮಯ ಮಾಡಿಕೊಂಡರು.ವೈ.ಎನ್.ಹೊಸಕೋಟೆಯಲ್ಲಿ ಕನ್ನಿಕಾಪರಮೇಶ್ವರಿ ದೇವಾಲಯದ ಬಳಿಯಿಂದ ಸೀತಾರಾಮ, ಲಕ್ಷ್ಮಣ, ವಾಸವಾಂಭ ಮಾರಮ್ಮ ದೇವತೆಗಳ ಮೆರವಣಿಗೆ ಆರಂಭವಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಮ್ಮ, ಇತರರು ಮೆರವಣಿಗೆಯಲ್ಲಿ ತೆರಳಿ ಬನ್ನಿಮಂಟಪದಲ್ಲಿ ಬನ್ನಿ ಪೂಜೆ ನೆರವೇರಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.