ವಿಜಯನಗರದಲ್ಲಿ ದಸರಾ ಈಜು ಶಿಬಿರ

7

ವಿಜಯನಗರದಲ್ಲಿ ದಸರಾ ಈಜು ಶಿಬಿರ

Published:
Updated:

ವಿಜಯನಗರದಲ್ಲಿ ದಸರಾ ಈಜು ಶಿಬಿರ

ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ದಸರಾ ರಜೆಯಲ್ಲಿ ಮಕ್ಕಳು ಮತ್ತು ಅವರ ಪೋಷಕರಿಗೆ ಈಜು ಕಲಿಸಲು ಹಂಪಿನಗರದಲ್ಲಿರುವ (ಆರ್‌ಪಿಸಿ ಲೇಔಟ್)  `ವಿಜಯನಗರ ಸ್ವಿಮ್ ಸೆಂಟರ್~ ಈ ತಿಂಗಳ 10ರಿಂದ ವಿಶೇಷ ಕಲಿಕಾ ಶಿಬಿರವನ್ನು ಹಮ್ಮಿಕೊಂಡಿದೆ.`ಶಿಬಿರದಲ್ಲಿ ಪ್ರಾಥಮಿಕ ಹಂತದ ಈಜು ಕಲಿಸುವುದರ ಜತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಈಜು ಸ್ಪರ್ಧೆಗಳಲ್ಲಿ ಸ್ಪರ್ಧಿಸಲು ಮಕ್ಕಳು ಮತ್ತು ಯುವಕರಿಗೆ ವೃತ್ತಿಪರ ತರಬೇತಿಯನ್ನೂ ನೀಡಲಾಗುವುದು. ಸ್ವಚ್ಛತೆ ಮತ್ತು ಬಹುಮುಖ್ಯವಾಗಿ ಈಜು ಅಭ್ಯಾಸಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ಕೊಡಲಾಗುವುದು~ ಎಂದು ಸೆಂಟರ್‌ನ ಮುಖ್ಯಸ್ಥ ಎ.ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.`ಶಿಬಿರದ ಅವಧಿಯಲ್ಲಿ ಮಕ್ಕಳಿಗಾಗಿ ಐದು ತಂಡಗಳಲ್ಲಿ, ಮಹಿಳೆಯರು ಮತ್ತು ಪುರುಷರಿಗೆ ತಲಾ ಎರಡು ತಂಡಗಳಲ್ಲಿ ಪ್ರತ್ಯೇಕ ಈಜು ತರಬೇತಿ ತರಗತಿಗಳನ್ನು ನಡೆಸಲಾಗುವುದು. ಶಿಬಿರದ ಸಮಯ ಮತ್ತಿತರ ವಿವರಗಳಿಗೆ ದೂರವಾಣಿ: 080- 23407604, ಮೊಬೈಲ್- 9900916868 ಸಂಪರ್ಕಿಸಬಹುದು~ ಎಂದು ಅವರು ಹೇಳಿದ್ದಾರೆ.

ಅಭಿನಯ ನಾಟಕ ಸ್ಪರ್ಧೆಗೆ ಪ್ರವೇಶ

ಜೈನ್ ವಿಶ್ವವಿದ್ಯಾಲಯದ ಸಿ.ಎಂ.ಎಸ್. ಆಶ್ರಯದಲ್ಲಿ ಮುಂದಿನ ಜನವರಿಯಲ್ಲಿ ನಡೆಯಲಿರುವ ಅಭಿನಯ ಕನ್ನಡ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವವರು ಅ.13ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದು.ಡಿಸೆಂಬರ್ ಮೂರನೇ ವಾರದಲ್ಲಿ ಆಯ್ಕೆ ಸುತ್ತು ನಡೆಯಲಿದ್ದು, ನೋಂದಣಿ ಉಚಿತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry