ವಿಜಯಪುರ: ಗೋಶಾಲೆಗೆ ಮೇವು ನೆರವು

7

ವಿಜಯಪುರ: ಗೋಶಾಲೆಗೆ ಮೇವು ನೆರವು

Published:
Updated:

ವಿಜಯಪುರ: ಭೂಮಿಯ ಮೇಲೆ ಜೀವಿಸುವ ಪ್ರತಿಯೊಬ್ಬ ಮನುಷ್ಯ, ಪ್ರಾಣಿ-ಪಕ್ಷಿ, ಕ್ರಿಮಿ ಕೀಟ ಸೇರಿದಂತೆ ಎಲ್ಲ ಜೀವಿಗಳಿಗೂ ಬದುಕುವ ಹಕ್ಕು ಇದ್ದು ಮನುಷ್ಯ ಇತರೆ ಜೀವಿಗಳಿಗೆ  ಸಹಾಯ ಹಸ್ತ ಚಾಚಬೇಕು ಎಂದು ಬೆಂಗಳೂರು ಅಕ್ಕಿಪೇಟೆಯ ವಾಸು ಸ್ವಾಮಿ ಜೈನ್ ಸೇವಾ ಮಂಡಳಿಯ ಅಧ್ಯಕ್ಷ ವಿನೋದ್ ಮೆಹತಾ ತಿಳಿಸಿದರು.ಇಲ್ಲಿನ ಪದ್ಮಾವತಿ ಪ್ರಾಣಿದಯಾ ಸಂಘದಲ್ಲಿ ಸೋಮವಾರ ಗೋವುಗಳಿಗೆ ಒಂದು ಲಾರಿ ಹಸಿ ಮೇವನ್ನು ವಿತರಿಸಿ ಅವರು ಮಾತನಾಡಿದರು.ಪ್ರಾಣಿದಯಾ ಸಂಘದ ಕಾರ್ಯದರ್ಶಿ ಸುಭಾಷ್‌ಕುಮಾರ್ ಜೈನ್ ಮಾತನಾಡಿ, `ನಮ್ಮ ಸೇವಾ ಸಂಸ್ಥೆಯು ಹದಿನೆಂಟು ವರ್ಷಗಳಿಂದ ನಿರಂತರವಾಗಿ ಗೋಶಾಲೆ, ಅನಾಥಾಶ್ರಮ, ವೃದ್ಧಾಶ್ರಮ ವಿಕಲಚೇತನರ ಸಂಸ್ಥೆ ಮತ್ತು ಬಡ ಹಾಗೂ ಅನಾರೋಗ್ಯ ಪೀಡಿತರ ಸಂಸ್ಥೆಗಳಿಗೆ ಭೇಟಿ ಕೊಟ್ಟು ಕೈಲಾದಷ್ಟು ಸೇವೆ ಮಾಡುತ್ತಾ ಬಂದಿದೆ~ ಎಂದು ತಿಳಿಸಿದರು. ಸಂಸ್ಥೆಯ ಕಾರ್ಯಕರ್ತರಾದ ರಾಜೇಂದ್ರ, ನೈನ್‌ಮಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry