ಗುರುವಾರ , ನವೆಂಬರ್ 21, 2019
20 °C

ವಿಜಯಸಂಕಲ್ಪ ಯಾತ್ರೆ: ಪೊಲೀಸರ ಸೂಚನೆ

Published:
Updated:

ಬೆಂಗಳೂರು: ಬಿಜೆಪಿಯು ನಗರದ ಅರಮನೆ ಮೈದಾನದಲ್ಲಿ ಸೋಮವಾರ (ಏ. 8) ಬೆಳಿಗ್ಗೆ `ವಿಜಯ ಸಂಕಲ್ಪ' ಸಮಾವೇಶ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಯಮಹಲ್ ರಸ್ತೆ ಹಾಗೂ ರಮಣ ಮಹರ್ಷಿ ರಸ್ತೆ ಸುತ್ತಮುತ್ತ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬೇಕೆಂದು ಪೊಲೀಸರು ಹೇಳಿದ್ದಾರೆ.ಸಮಾವೇಶಕ್ಕೆ ಬರುವ ವಾಹನಗಳು ಜಯಮಹಲ್ ರಸ್ತೆ ಮೂಲಕ ಅರಮನೆ ಮೈದಾನ ಪ್ರವೇಶಿಸಬೇಕು. ವಾಹನಗಳ ನಿಲುಗಡೆಗೆ ಮೈದಾನದ ಒಳಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)