ಮಂಗಳವಾರ, ಜೂನ್ 22, 2021
27 °C

ವಿಜಯಾ ಬ್ಯಾಂಕ್ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಜಯಾ ಬ್ಯಾಂಕ್ ತಂಡದವರು ಇಲ್ಲಿ ನಡೆಯುತ್ತಿರುವ ಪ್ರೊ. ಎನ್.ಸಿ. ಪರಪ್ಪ ಸ್ಮಾರಕ ಟ್ರೋಫಿ ಬ್ಯಾಸ್ಕೆಟ್‌ಬಾಲ್ ಟೂರ್ನಿಯಲ್ಲಿ 63-42 ಪಾಯಿಂಟ್‌ಗಳಿಂದ ಕೋರಮಂಗಲ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಸೋಲಿಸಿದರು.ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡ ವಿರಾಮದ ವೇಳೆಗೆ 31-23ರಲ್ಲಿ ಮುನ್ನಡೆ ಹೊಂದಿತ್ತು. ವಿರಾಮದ ನಂತರವೂ ಚುರುಕಿನ ಆಟವಾಡಿ ಈ ಅಂತರವನ್ನು ಹೆಚ್ಚಿಸಿಕೊಂಡಿತು. ದಿನದ ಇತರ ಪಂದ್ಯಗಳಲ್ಲಿ ಯಂಗ್ ಓರಿಯನ್ಸ್ 52-46ರಲ್ಲಿ (ವಿರಾಮದ ಸ್ಕೋರು 36-19) ಎಎಸ್‌ಸಿ ತಂಡದ ಮೇಲೂ, ಎಎಸ್‌ಸಿ ತಂಡ 69-56ರಲ್ಲಿ (37-30) ಸಿಎಂಪಿ ತಂಡದ ವಿರುದ್ಧವೂ, ಎಂಇಜಿ 41-11ರಲ್ಲಿ ಸದರ್ನ್ ಬ್ಲ್ಯೂಸ್ ವಿರುದ್ಧವೂ ಜಯ ಸಾಧಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.