ಭಾನುವಾರ, ನವೆಂಬರ್ 17, 2019
24 °C
ವಿಶ್ವಕಪ್ ಶೂಟಿಂಗ್

ವಿಜಯ್‌ಗೆ 18ನೇ ಸ್ಥಾನ

Published:
Updated:

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್‌ನಲ್ಲಿ ರಜತ ಪದಕ ಗೆದ್ದಿದ್ದ ಭಾರತದ ವಿಜಯ ಕುಮಾರ್ ಐಎಸ್‌ಎಸ್‌ಎಫ್ ವಿಶ್ವಕಪ್‌ನ ಪುರುಷರ ವಿಭಾಗದ 25 ಮೀಟರ್ಸ್ ರ‍್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯ ಫೈನಲ್ ಪ್ರವೇಶಿಸುವಲ್ಲಿ ವಿಫಲರಾದರು.ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ಸೋಮವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅವರು 18ನೇ ಸ್ಥಾನಕ್ಕೆ ಕುಸಿದರು.ಲಂಡನ್ ಒಲಿಂಪಿಕ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದ ವಿಜಯ ಕುಮಾರ್, ವಿಶ್ವಕಪ್ ಟೂರ್ನಿಯಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದರು.ಭಾರತದ ಮತ್ತಿಬ್ಬರು ಸ್ಪರ್ಧಿಗಳಾದ ಪೆಂಬಾ ತಮಾಂಗ್ ಮತ್ತು ಹರ್‌ಪ್ರೀತ್ ಸಿಂಗ್ ಕೂಡ ಅಂತಿಮ ಸುತ್ತು ತಲುಪಲು ಶಕ್ತರಾಗಲಿಲ್ಲ.ತಮಾಂಗ್ 13ನೇ ಮತ್ತು ಹರ್‌ಪ್ರೀತ್ ಸಿಂಗ್ 16ನೇ ಸ್ಥಾನ ಪಡೆದರು. ಈ ವಿಭಾಗದಲ್ಲಿ ಜರ್ಮನಿಯ ಕ್ರಿಶ್ಚಿಯನ್ ರೀಟ್ಜ್ , ಚೀನಾದ ಯೇಹಾಂಗ್ ಲಿ ಮತ್ತು ರಷ್ಯಾದ ಲಿಯೋನಿಡ್ ಎಕಿಮೋವ್ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದರು.

ಪ್ರತಿಕ್ರಿಯಿಸಿ (+)