ಮಂಗಳವಾರ, ಜನವರಿ 28, 2020
17 °C

ವಿಜಯ್‌ ದಿವಸ್‌: ಹುತಾತ್ಮರಿಗೆ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 1971ರ ಇಂಡೊ– ಪಾಕ್‌ ಯುದ್ಧದಲ್ಲಿ ಮಡಿದ ವೀರ ಯೋಧರ ಸ್ಮರಣಾರ್ಥ ನಗರದ ಸೇನಾ ತರಬೇತಿ ಕೇಂದ್ರದಲ್ಲಿ ಸೋಮವಾರ ವಿಜಯ್‌ ದಿವಸ್‌ ಕಾರ್ಯಕ್ರಮ ನಡೆಯಿತು. ಯೋಧರಿಗೆ ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆಯ ಸೈನಿಕರು ಗೌರವ ವಂದನೆ ಸಲ್ಲಿಸಿದರು.ವಾಯುಸೇನೆಯ ಪರವಾಗಿ ಏರ್‌ ಮಾರ್ಷಲ್‌ ಪರಮ್‌ಜಿತ್‌ ಸಿಂಗ್‌ ಗಿಲ್‌, ಭೂಸೇನೆಯ ಪರವಾಗಿ ಬ್ರಿಗೇಡಿ ಯರ್‌ ಎಸ್‌.ಎಸ್‌.ತಿನವಾರ್‌ ಮತ್ತು ನೌಕಾಸೇನೆ ಪರವಾಗಿ ಕಮಾಂಡರ್‌ ಎಂ.ಹಂಡಾ ಗೌರವ ವಂದನೆ ಸಲ್ಲಿಸಿದರು.ನಿವೃತ್ತ ಸೇನಾಧಿಕಾರಿಗಳಾದ ಲೆಫ್ಟಿನೆಂಟ್‌ ಜನರಲ್‌ ಮನಮೋಹನ್‌ ಸಿಂಗ್‌, ಏರ್‌ ಮಾರ್ಷಲ್‌ ಡಿ.ಜಿ.ಕಂಗ್ಲಿ  ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)