ಮಂಗಳವಾರ, ಮೇ 11, 2021
24 °C

ವಿಜಯ್ ಕ್ಲಬ್: ಟಿ10 ಟ್ರೋಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ನಗರದ ವಿಜಯ್ ಕ್ರಿಕೆಟ್ ಕ್ಲಬ್ ತಂಡವು ಮಾಧವರಾವ್ ಪಾಟೀಲ್ ಸ್ಮರಣಾರ್ಥ ಟಿ10 ಕ್ರಿಕೆಟ್ ಪಂದ್ಯಾವಳಿಯನ್ನು ಗೆದ್ದುಕೊಂಡಿದೆ.

ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಅಂತಿಮ ಪಂದ್ಯದಲ್ಲಿ ಪಟ್ನೆ ಕ್ರಿಕೆಟ್ ಕ್ಲಬ್ ತಂಡವನ್ನು ಮಣಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಪಟ್ನೆ ಕ್ರಿಕೆಟ್ ಕ್ಲಬ್ ತಂಡ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.ಮಳೆಯ ಹಿನ್ನೆಲೆಯಲ್ಲಿ 10 ಓವರ್‌ನ ಪಂದ್ಯವನ್ನು 5 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಪಟ್ನೆ ಕ್ರಿಕೆಟ್ ಕ್ಲಬ್ ತಂಡ 3 ವಿಕೆಟ್ ನಷ್ಟಕ್ಕೆ 28 ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ ವಿಜಯ ಕ್ಲಬ್ ತಂಡ ತಂಡವು ಯಾವುದೇ ವಿಕೆಟ್ ನಷ್ಟವಿಲ್ಲದೆ 29 ರನ್‌ಗಳನ್ನು ಗಳಿಸಿ ಗೆಲುವಿನ ನಗೆ ಬೀರಿತು.ಕೇದಾರನಾಥ ಪಂದ್ಯ ಪುರುಷ ಮತ್ತು ಮನೋಜ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.

ಸೋಲು-ಗೆಲುವಿಗಿಂತ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿ ಮಾತನಾಡಿದ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ ನುಡಿದರು.ಹಾವಗಿರಾವ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಚಂದ್ರರಾವ್ ಗಂದಗೆ, ನಗರಸಭೆ ಸದಸ್ಯ ಜಗದೀಶ್ ಪಾಟೀಲ್, ಪ್ರಮುಖರಾದ ಜಗದೀಶ್ ಬಿರಾದಾರ್, ಸೂರ್ಯಕಾಂತ್ ಮುಚಳಂಬೆ, ಡಾ. ವಿ.ಎನ್. ಪ್ರಭಾ, ವೀರಶೆಟ್ಟಿ ಪೊಲೀಸ್ ಪಾಟೀಲ್, ಅಪ್ಪಾರಾವ್ ಪಾಟೀಲ್, ಶಿವಕುಮಾರ್ ಪಾಟೀಲ್ ಇದ್ದರು.ಮಹೇಶ್ ಪಾಟೀಲ್ ಸ್ವಾಗತಿಸಿದರು. ಶಿವಶಂಕರ್ ಟೋಕರೆ ನಿರೂಪಿಸಿದರು. ಅನಿಲ್ ದೇಶಮುಖ್ ವಂದಿಸಿದರು. ಮಾಧವ್ ಗ್ರೂಪ್ ವತಿಯಿಂದ ಪಂದ್ಯಾವಳಿ ಆಯೋಜಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.