ಮಂಗಳವಾರ, ಮೇ 18, 2021
22 °C

ವಿಜಯ್ ಜೋಲ್‌ಗೆ ಸಾರಥ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಮಹಾರಾಷ್ಟ್ರದ ವಿಜಯ್ ಜೋಲ್ ಅವರು ಜೂನ್ ಕೊನೆಯ ವಾರ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿರುವ ಮೂರು ರಾಷ್ಟ್ರಗಳ ನಡುವಣ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿರುವ ಭಾರತದ ಜೂನಿಯರ್ ತಂಡದ ಸಾರಥ್ಯವನ್ನು ವಹಿಸಲಿದ್ದಾರೆ.ಐಪಿಎಲ್ ಆರನೇ ಆವೃತ್ತಿಯಲ್ಲಿ ರಾಜಸ್ತಾನ್ ತಂಡದ ಪರ ಆಡಿದ್ದ ಸಂಜು ಸ್ಯಾಮ್ಸನ್, 15 ಆಟಗಾರರ ತಂಡದಲ್ಲಿ ಉಪ ನಾಯಕರಾಗಿ ಆಯ್ಕೆಯಾಗಿದ್ದಾರೆ.`ಆಸ್ಟ್ರೇಲಿಯಾ ಸರಣಿಯಲ್ಲಿ ಭಾಗವಹಿಸುವ ತಂಡದ ಆಯ್ಕೆಗಾಗಿ ಅಖಿಲ ಭಾರತ ಜೂನಿಯರ್ ಆಯ್ಕೆ ಸಮಿತಿ ಬೆಂಗಳೂರಿನಲ್ಲಿ ಶನಿವಾರ ಸಭೆ ನಡೆಸಿದೆ' ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ತಂಡ ಇಂತಿದೆ: ವಿಜಯ್ ಜೋಲ್, ಸಂಜು ಸ್ಯಾಮ್ಸನ್,ಅಖಿಲ್ ಹೆರ್ವಾಡ್ಕರ್, ಶ್ರೇಯಸ್ ಐಯ್ಯರ್, ದೀಪಕ್ ಹೂಡಾ, ಮೊಹಮ್ಮದ್ ಸೈಫ್, ಸರ್ಫರಾಜ್ ಖಾನ್,ರಿಕಿ  ಭುಯಿ, ಅಭಿಮನ್ಯು ಲಂಬಾ, ರಿಷಿ ಅರೊಥೆ, ಅತು ಸಿಂಗ್, ಸಿ.ವಿ. ಮಿಲಿಂದ್, ಆಮೀರ್ ಗನಿ, ಕುಲದೀಪ್ ಯಾದವ್,ಅಂಕುಷ್ ಬೈನ್ಸ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.