ವಿಜಯ್ ಮೋರೆಗೆ ಮಸಿ: 15 ಜನ ಆರೋಪ ಮುಕ್ತ

7

ವಿಜಯ್ ಮೋರೆಗೆ ಮಸಿ: 15 ಜನ ಆರೋಪ ಮುಕ್ತ

Published:
Updated:

ಬೆಂಗಳೂರು: ಬೆಳಗಾವಿ ಪಾಲಿಕೆಯ ಆಗಿನ ಮೇಯರ್ ವಿಜಯ್ ಮೋರೆ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಾಧ್ಯಕ್ಷ ಪ್ರವೀಣ್‌ಕುಮಾರ್ ಶೆಟ್ಟಿ ಸೇರಿದಂತೆ 15 ಸದಸ್ಯರನ್ನು ನಗರದ ಏಳನೇ ಎಸಿಎಂಎಂ ನ್ಯಾಯಾಲಯ ಶುಕ್ರವಾರ ಆರೋಪ ಮುಕ್ತಗೊಳಿಸಿದೆ.2005ರ ನವೆಂಬರ್ 11ರಂದು ಶಾಸಕರ ಭವನದಲ್ಲಿ ಮೋರೆ ಮುಖಕ್ಕೆ ಮಸಿ ಬಳಿದಿದ್ದ ಆರೋಪದ ಮೇಲೆ ಪೊಲೀಸರು ಪ್ರವೀಣ್‌ಕುಮಾರ್ ಶೆಟ್ಟಿ ಸೇರಿ15 ಮಂದಿಯನ್ನು ಬಂಧಿಸಿದ್ದರು. ನಂತರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನೂ ಸಲ್ಲಿಸಿದ್ದರು. 6 ವರ್ಷಗಳ ಬಳಿಕ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ಅವರೆಲ್ಲರನ್ನೂ ಆರೋಪಮುಕ್ತಗೊಳಿಸಿ ಆದೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry