ಶನಿವಾರ, ಜೂನ್ 19, 2021
28 °C

ವಿಜಯ್ ಹಜಾರೆ: ಮುಂಬೈ-ಬಂಗಾಳ ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಐಎಎನ್‌ಎಸ್): ಪ್ರಶಸ್ತಿ ಜಯಿಸಬೇಕು ಎನ್ನುವ ಕನಸು ಹೊತ್ತಿರುವ ಮುಂಬೈ ಹಾಗೂ ಬಂಗಾಳ ತಂಡಗಳು ಇಲ್ಲಿ ನಡೆಯುವ ವಿಜಯ್ ಹಜಾರೆ ಟ್ರೋಫಿ  ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೋಮವಾರ ಮುಖಾಮುಖಿಯಾಗಲಿವೆ.ಮೂರು ಸಲ ಫೈನಲ್ ಪ್ರವೇಶಿಸಿದರೂ ಚಾಂಪಿಯನ್ ಆಗಬೇಕು ಎನ್ನುವ ಸೌರವ್ ಗಂಗೂಲಿ ನೇತೃತ್ವದ ಬಂಗಾಳ ತಂಡದ ಆಸೆ ಈಡೇರಿಲ್ಲ. 2008ರಲ್ಲಿ ಸೌರಾಷ್ಟ್ರ ಹಾಗೂ 2009 ಮತ್ತು 10ರಲ್ಲಿ ತಮಿಳುನಾಡು ಎದುರು ಪ್ರಶಸ್ತಿ ಹೊಸ್ತಿಲಲ್ಲಿದ್ದಾಗ ಈ ತಂಡ ಸೋಲಿನ ಸಂಕಷ್ಟ ಅನುಭವಿಸಿದೆ.ಮುಂಬೈ ಸಹ ಪ್ರಶಸ್ತಿ ಜಯಿಸುವ ಆಸೆ ಹೊಂದಿದೆ. ಈ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ವಾಸೀಮ್ ಜಾಫರ್, ಅಜಿಂಕ್ಯ ರಹಾನೆ ಹಾಗೂ ಅಭಿಷೇಕ್ ನಾಯರ್ ಅವರು ಹಿಂದಿನ ಪಂದ್ಯಗಳಲ್ಲಿ ನೀಡಿದ ಪ್ರದರ್ಶನವೇ ಇದಕ್ಕೆ ಸಾಕ್ಷಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.