ಗುರುವಾರ , ಏಪ್ರಿಲ್ 15, 2021
28 °C

ವಿಜಯ ಬ್ಯಾಂಕ್- ಎಚ್‌ಎನ್‌ಐ ಶಾಖೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗರಿಷ್ಠ ಮಟ್ಟದ ವಹಿವಾಟು ನಡೆಸುವ  ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ವಿಜಯ ಬ್ಯಾಂಕ್ ನಗರದ ಡಾಲರ್ಸ್ ಕಾಲನಿಯಲ್ಲಿ ಮೊದಲ `ಎಚ್‌ಎನ್‌ಐ~ (ಹೈ ನೆಟ್‌ವರ್ಥ್ ಇಂಡಿವಿಜುವಲ್) ಶಾಖೆ ಪ್ರಾರಂಭಿಸಿದೆ.24x7  ಬ್ಯಾಂಕಿಂಗ್ ಸೌಲಭ್ಯದ ಜತೆಗೆ ಹಲವು ಮೌಲ್ಯವರ್ಧಿತ ಸೇವೆಗಳನ್ನು ಗ್ರಾಹಕರು ಈ ಶಾಖೆಯಿಂದ ಪಡೆಯಬಹುದು. ಕಚೇರಿ ಅವಧಿಯಲ್ಲಿ ನಗದು ಮತ್ತು ನಗದು ರಹಿತ ವಹಿವಾಟಿಗೆ 1 ಗಂಟೆ ನಿಗದಿಪಡಿಸಲಾಗಿದೆ.ಬ್ಯಾಂಕಿನಲ್ಲಿ ಖಾತೆ ಹೊಂದಿದವರು ಆರಂಭಿಕ ಕೊಡುಗೆಯಾಗಿ ಗರಿಷ್ಠ 2 ಲಕ್ಷದವರೆಗಿನ 5 ಡಿ.ಡಿಗಳನ್ನು ಶುಲ್ಕ ರಹಿತವಾಗಿ ಪಡೆಯಬಹುದು. ಶೀಘ್ರದಲ್ಲೇ ಈ ಶಾಖೆ ಮೂಲಕ `ಮನೆ ಬಾಗಿಲಿಗೆ ಬ್ಯಾಂಕ್~ ಸೇವೆ ಪರಿಚಯಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.