ವಿಜಯ ಬ್ಯಾಂಕ್: ರೂ 151 ಕೋಟಿ ಲಾಭ

7

ವಿಜಯ ಬ್ಯಾಂಕ್: ರೂ 151 ಕೋಟಿ ಲಾಭ

Published:
Updated:

 ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ವಿಜಯ ಬ್ಯಾಂಕ್, ಶೇ 21ರಷ್ಟು ಪ್ರಗತಿಯೊಂದಿಗೆ  ರೂ 151 ಕೋಟಿ ಗಳಷ್ಟು ನಿವ್ವಳ ಲಾಭ ದಾಖಲಿಸಿದೆ.ಸೋಮವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ವ್ಯವಸ್ಥಾಪಕ ನಿರ್ದೇಶಕ ಆಲ್ಬರ್ಟ್  ಟೌರೊ ಬ್ಯಾಂಕಿನ ತ್ರೈಮಾಸಿಕ ಸಾಧನೆ ಪ್ರಕಟಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ಬ್ಯಾಂಕಿನ ನಿವ್ವಳ ಬಡ್ಡಿ ವರಮಾನ (ಎನ್‌ಐಐ) ಶೇ 36ರಷ್ಟು ಏರಿಕೆ ಕಂಡಿದೆ. ಠೇವಣಿ ಸಂಗ್ರಹ ಶೇ 8ರಷ್ಟು ಹಾಗೂ ಸಾಲ ನೀಡಿಕೆ ಪ್ರಮಾಣ  ಶೇ 10ರಷ್ಟು ಹೆಚ್ಚಿದೆ. ಒಟ್ಟು ವರಮಾನ ್ಙ 1584 ಕೋಟಿಗಳಿಗೆ ಏರಿದ್ದು, ಶೇ 9ರಷ್ಟು ಪ್ರಗತಿ ದಾಖಲಿಸಿದೆ ಎಂದು ಮಾಹಿತಿ ನೀಡಿದರು. ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ   ಕಾರ್ಯ ನಿರ್ವಹಣಾ ಲಾಭ ರೂ 742 ಕೋಟಿಗಳಿಂದ ರೂ 936 ಕೋಟಿಗಳಿಗೆ ಏರಿಕೆ ಕಂಡಿದ್ದು, ಶೇ 26ರಷ್ಟು ಪ್ರಗತಿ ದಾಖಲಿಸಿದೆ. ನಿವ್ವಳ ಬಡ್ಡಿ ವರಮಾನವು ಶೇ 38ರಷ್ಟು ಹಾಗೂ  ನಿವ್ವಳ ಬಡ್ಡಿ ಲಾಭವು ಶೇ 3ರಷ್ಟು ಹೆಚ್ಚಳವಾಗಿದೆ ಎಂದರು.‘ಒಟ್ಟು ವಸೂಲಾಗದ ಸಾಲದ (ಎನ್‌ಪಿಎ) ಪ್ರಮಾಣ ನಿಯಂತ್ರಣದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ರೂ 512ಕೋಟಿಯಿಂದ ರೂ 598 ಕೋಟಿಗೆ  ಏರಿದೆ,  ಕೃಷಿ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಬ್ಯಾಂಕ್ ನೀಡುವ ಸಾಲದ ಪ್ರಮಾಣ ಕ್ರಮವಾಗಿ ಶೇ 12 ಮತ್ತು ಶೇ 15ರಷ್ಟು ಹೆಚ್ಚಳವಾಗಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry