`ವಿಜಾಪುರಕ್ಕೆ 2 ದಿನಕ್ಕೊಮ್ಮೆ ನೀರು'

7

`ವಿಜಾಪುರಕ್ಕೆ 2 ದಿನಕ್ಕೊಮ್ಮೆ ನೀರು'

Published:
Updated:

ವಿಜಾಪುರ: ಇನ್ನು ಕೆಲವೇ ದಿನಗಳಲ್ಲಿ ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಸಲಾಗುವುದು ಎಂದು ಎಂದು ವಿಜಾಪುರ ನಗರ ಮತಕ್ಷೇತ್ರದ ಶಾಸಕ ಅಪ್ಪು ಪಟ್ಟಣಶೆಟ್ಟಿ ಹೇಳಿದರು.`ನಗರದ ನೀರು ಪೂರೈಕೆ ವ್ಯವಸ್ಥೆ ಸುಧಾರಣೆಗೆ ಕೈಗೆತ್ತಿಕೊಂಡಿರುವ ರೂ.88.90 ಕೋಟಿ ಮೊತ್ತದ ಯೋಜನೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಜನತೆಗೆ ದಿನಬಿಟ್ಟು ದಿನ ನೀರು ಪೂರೈಸಲಾಗುವುದು' ಎಂದರು.

ವಿಜಾಪುರ ನಗರಕ್ಕೆ ಕೃಷ್ಣಾ ನದಿ ಮೂಲದಿಂದ ನೀರು ಪೂರೈಸುವ ಯೋಜನೆಯ ಕೊಲ್ಹಾರ ಜಾಕ್‌ವೆಲ್‌ಗೆ ಮಂಗಳವಾರ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿ ಮಾತನಾಡಿದರು.`ಕೃಷ್ಣಾ ನದಿಯಿಂದ ನಗರಕ್ಕೆ ನೀರು ಪೂರೈಸುವ ಎರಡನೇ ಹಂತದ ಯೋಜನೆಯ ಸಾಮರ್ಥ್ಯ ಹೆಚ್ಚಿಸುವ ಈ ಕಾಮಗಾರಿಗೆ 2008ರಲ್ಲಿ ಸರ್ಕಾರದ ಮಂಜೂರಾತಿ ಪಡೆಯಲಾಗಿತ್ತು. ನಗರದ ಜನಸಂಖ್ಯೆ ಈಗ 3.30 ಲಕ್ಷ ಇದ್ದು, 2025ನೇ ಸಾಲಿಗೆ 3.80 ಲಕ್ಷಕ್ಕೆ ತಲುಪಲಿದೆ. ಇಷ್ಟು ಜನಸಂಖ್ಯೆಗೆ ನಿತ್ಯ 57.46 ಎಂ.ಎಲ್.ಡಿ. ನೀರು ಪಡೆಯಬಹುದಾಗಿದೆ. 2040ರ ಸಾಲಿಗೆ ಇರಬಹುದಾದ ನಗರದ 5 ಲಕ್ಷ ಜನಸಂಖ್ಯೆಗೆ ಅಗತ್ಯವಿರುವ 75.60 ಎಂ.ಎಲ್.ಡಿ. ನೀರನ್ನೂ ಕೆಲ ಮಾರ್ಪಾಡಿನೊಂದಿಗೆ ಈ ಯೋಜನೆಯಿಂದಲೇ ಪಡೆಯಬಹುದಾಗಿದೆ' ಎಂದರು.`ವಿಜಾಪುರ ನಗರಕ್ಕೆ ದಿನದ 24 ಗಂಟೆಗಳ ಕಾಲವೂ ನಿರಂತರವಾಗಿ ನೀರು ಪೂರೈಸುವ ಪ್ರಸ್ತಾವ ಇದೆ. ನಗರದ ಹತ್ತು ವಿಭಾಗಗಳ ಪೈಕಿ ನಾಲ್ಕರಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಗೊಳಿಸುವ ಕಾಮಗಾರಿ ತಕ್ಷಣವೇ ಆರಂಭಗೊಳ್ಳಲಿದೆ. ಉಳಿದ ವಿಭಾಗಗಳಿಗೂ ಈ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸಚಿವ ಸಂಪುಟದಿಂದ ಅನುಮೋದನೆ ಪಡೆಯಲಾಗುವುದು' ಎಂದು ಅಪ್ಪು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry