ವಿಜಾಪುರದಲ್ಲಿ ರಾಷ್ಟ್ರೀಯ ಜೂನಿಯರ್ ವಾಲಿಬಾಲ್

7

ವಿಜಾಪುರದಲ್ಲಿ ರಾಷ್ಟ್ರೀಯ ಜೂನಿಯರ್ ವಾಲಿಬಾಲ್

Published:
Updated:

ವಿಜಾಪುರ: ವಿಜಾಪುರ ಜಿಲ್ಲಾ ವಾಲಿ ಬಾಲ್ ಸಂಸ್ಥೆ ಹಾಗೂ ಕರ್ನಾಟಕ ವಾಲಿಬಾಲ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಫೆಬ್ರುವರಿ 10 ರಿಂದ 17ವರೆಗೆ 18 ವರ್ಷ ವಯಸ್ಸಿನೊಳ ಗಿನವರ ಬಾಲಕರ ಮತ್ತು ಬಾಲಕಿ ಯರ ವಿಭಾಗದ 37ನೇ ರಾಷ್ಟ್ರೀಯ ಜೂನಿಯರ್ ವಾಲಿಬಾಲ್ ಚಾಂಪಿ ಯನ್‌ಷಿಪ್ ವಿಜಾಪುರದಲ್ಲಿ ನಡೆಯಲಿದೆ.ಈ ವಿಷಯವನ್ನು ಗುರುವಾರ ಕರ್ನಾಟಕ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಎ.ಲೋಕೇಶ ಗೌಡ ಹಾಗೂ ಸಂಘಟನಾ ಸಮಿತಿ ಕಾರ್ಯದರ್ಶಿ ಬಿ.ಎಂ. ಕೋಕರೆ ತಿಳಿಸಿದರು.ಈ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರದ 25 ರಾಜ್ಯ ತಂಡಗಳು ಭಾಗವಹಿಸಲಿವೆ. ವಿಜಾಪುರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ಒಳಗಡೆ ಮೂರು ಹಾಗೂ ಹೊರಗಡೆ ಎರಡು ಹೀಗೆ ಒಟ್ಟಾರೆ 5 ಅಂಕಣಗಳನ್ನು  ಸಿದ್ಧಪಡಿಸಲಾಗಿದೆ.ಸುಮಾರು 10 ಸಾವಿರ ಜನ ಕುಳಿತು ವೀಕ್ಷಿಸಲು ಸಾಧ್ಯವಾಗುವಂತೆ ಗ್ಯಾಲರಿ ವ್ಯವಸ್ಥೆ ಮಾಡಲಾಗುತ್ತಿದೆ. ಉದ್ಘಾಟನಾ ಸಮಾರಂಭಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ, ಕ್ರೀಡಾ ಸಚಿವರು, ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಆಹ್ವಾನಿಸಲಾಗಿದೆ.ಕರ್ನಾಟಕ ತಂಡದವರು ಒಂದು ತಿಂಗಳಿನಿಂದ ವಿಜಾಪುರದಲ್ಲಿ ತರಬೇತಿ ಪಡೆಯುತ್ತಿದ್ದಾರೆ. 16 ಜನರನ್ನು ಆಯ್ಕೆ ಮಾಡಲಾಗಿದ್ದು, ಅವರಲ್ಲಿ ಇಬ್ಬರು ವಿಜಾಪುರ ಜಿಲ್ಲೆಯ ಆಟಗಾರರು ಇದ್ದಾರೆ. 1994ರಲ್ಲಿ ವಿಜಾಪುರ ನಗರದಲ್ಲಿ ಈ ಚಾಂಪಿಯನ್‌ಶಿಪ್ ನಡೆದಿತ್ತು. ಈಗ ಎರಡನೇ ಬಾರಿ ಇಲ್ಲಿ ಸಂಘಟಿಸಲಾಗಿದೆ.  ಎಂದು ಲೋಕೇಶಗೌಡ ಹೇಳಿದರು.ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ಪ್ರಮುಖರಾದ ಅಜಾದ ಪಟೇಲ್, ಎಸ್.ಎಸ್. ಹಿರೇಮಠ, ಮೇಲಿನಕೇರಿ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry