ಮಂಗಳವಾರ, ಮೇ 18, 2021
24 °C

ವಿಜಾಪುರದಲ್ಲಿ ಸಹ ಭೋಜನ: ಕೈದಿಗಳಿಗೆ ಪೊಲೀಸ್ ಆತಿಥ್ಯ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ವಿಶೇಷ ಕಾರ್ಯಕ್ರಮ. ಕೈದಿಗಳು ಅತಿಥಿಗಳಾಗಿದ್ದರು. ಪೊಲೀಸರು ಅವರ ಸೇವೆಗೆ ನಿಂತಿದ್ದರು!ಬಸವ ಜಯಂತಿ ಅಂಗವಾಗಿ ಜಿಲ್ಲಾ ಪೊಲೀಸ್ ಇಲಾಖೆ, ಹರಿಹರದ ಪಂಚಮಸಾಲಿ ಪೀಠದಿಂದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಸಹಭೋಜನ ಹಮ್ಮಿಕೊಳ್ಳಲಾಗಿತ್ತು.ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ. ರಾಜಪ್ಪ ಅವರು ಸ್ವತಃ ಕೈದಿಗಳಿಗೆ ಹೋಳಿಗೆ, ಸಿಹಿ ಪದಾರ್ಥ ಬಡಿಸಿದರು. ಕೈದಿಗಳೊಂದಿಗೆ ಅಧಿಕಾರಿಗಳು, ಸ್ವಾಮೀಜಿಗಳು ಊಟ ಮಾಡಿದರು.`ಬಸವಣ್ಣನವರ ಆದರ್ಶಗಳನ್ನು ಪಾಲಿಸಲು ಹಾಗೂ ಕೈದಿಗಳು ಮನಸ್ಸನ್ನು ಪರಿವರ್ತಿಸಿಕೊಳ್ಳಲು ಇದೊಂದು ಆದರ್ಶ ಕಾರ್ಯಕ್ರಮ~ ಎಂದು ಸಾನಿಧ್ಯ ವಹಿಸಿದ್ದ ಸ್ಥಳೀಯ ಜ್ಞಾನಯೋಗಾಶ್ರಮದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.`ಬಸವ ಜಯಂತಿ ದಿನದಂದು ಕೈದಿಗಳಿಗಾಗಿ ಸಹ ಭೋಜನ ಕಾರ್ಯಕ್ರಮ ನಿರಂತರವಾಗಿ ನಡೆಯಬೇಕು. ಆ ಮೂಲಕ ಬಸವಣ್ಣನವರ ಆದರ್ಶವನ್ನು ಎಲ್ಲರೂ ಪಾಲಿಸಬೇಕು~ ಎಂದರು. ಶಿವಯೋಗಿ ಕಳಸದ  ಅವರು ಕೈದಿಗಳಿಗೆ ಆಟದ ಸಾಮಗ್ರಿಗಳನ್ನು ವಿತರಿಸಿದರು.ಡಾ.ಡಿ.ಸಿ. ರಾಜಪ್ಪ ಮಾತನಾಡಿ, `ಮೂರು ವರ್ಷಗಳಿಂದ ಬಸವ ಜಯಂತಿಯಂದು ಜಿಲ್ಲಾ ಪೊಲೀಸ್ ಇಲಾಖೆಯಿಂದ ಕೈದಿಗಳಿಗೆ ಸಹಭೋಜನ ಕೂಟ ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮ ನಿಲ್ಲಬಾರದು~ ಎಂದರು.ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಕರ್ಣ ಕ್ಷತ್ರಿ,  ಕುಸಿರಾಜ್ ಬಾಗೇವಾಡಿ, ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.