ವಿಜಾಪುರ ಜಿಲ್ಲೆಗೂ ವಿಶೇಷ ಸ್ಥಾನಮಾನ

ಸೋಮವಾರ, ಮೇ 27, 2019
27 °C

ವಿಜಾಪುರ ಜಿಲ್ಲೆಗೂ ವಿಶೇಷ ಸ್ಥಾನಮಾನ

Published:
Updated:

ವಿಜಾಪುರ: ~ಸಂವಿಧಾನದ ಕಲಂ 371ರ ಅಡಿಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶಕ್ಕೆ ನೀಡಿರುವ ವಿಶೇಷ ಸ್ಥಾನಮಾನವನ್ನು ಹಿಂದುಳಿದ ವಿಜಾಪುರ ಜಿಲ್ಲೆಗೂ ವಿಸ್ತರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ ಭಾನುವಾರ ಬಾಗಿನ ಅರ್ಪಿಸಿ, ಉತ್ತಮ ಮಳೆ-ಬೆಳೆ, ಸುಖ-ಸಮೃದ್ಧಿಗಾಗಿ ಕೃಷ್ಣೆಗೆ ಪ್ರಾರ್ಥನೆ ಸಲ್ಲಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.`ಹೈದ್ರಾಬಾದ್ ಕರ್ನಾಟಕ ಪ್ರದೇಶದಂತೆಯೇ ವಿಜಾಪುರ ಜಿಲ್ಲೆಯೂ ಹಿಂದುಳಿದಿದೆ. ಈ ಜಿಲ್ಲೆಯ ಅಭಿವೃದ್ಧಿಗೂ ವಿಶೇಷ ಸೌಲಭ್ಯ ಕಲ್ಪಿಸಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ವಿಶೇಷ ಸ್ಥಾನಮಾನ ನೀಡಲಾಗುತ್ತಿರುವ  ಹೈದ್ರಾಬಾದ್ ಕರ್ನಾಟಕ ಪ್ರದೇಶದೊಂದಿಗೆ ಈ ಜಿಲ್ಲೆಯನ್ನೂ ಸೇರಿಸಿ ಸೌಲಭ್ಯ ನೀಡಬೇಕು ಎಂದು ನಾನು ದೆಹಲಿಗೆ ಹೋದಾಗ ಸಂಬಂಧಿಸಿದವರನ್ನು ಖುದ್ದಾಗಿ ಭೇಟಿಯಾಗಿ ಮನವಿ ಮಾಡಿಕೊಳ್ಳುತ್ತೇನೆ~ ಎಂದರು.`ಬೆಳೆ ಸಾಲ ಮನ್ನಾ ಘೋಷಣೆಗೆ ಸರ್ಕಾರ ಬದ್ಧವಾಗಿದೆ. ಗೊಂದಲಗಳಿಗೆ ಅವಕಾಶ ಇರದಂತೆ ತಕ್ಷಣವೇ ಈ ಕುರಿತು ಸರ್ಕಾರಿ ಆದೇಶ ಹೊರಡಿಸಲಾಗುವುದು.ರಾಜ್ಯ ಸರ್ಕಾರ ಮನ್ನಾ ಮಾಡಿರುವ ರೂ 3600 ಕೋಟಿ ಬೆಳೆ ಸಾಲದಲ್ಲಿ ಶೇ 75ರಷ್ಟು ಪಾಲನ್ನು ಕೊಡಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.`ಬರದಿಂದ ರಾಜ್ಯದಲ್ಲಿ ರೂ 2000 ಕೋಟಿ ಮೊತ್ತದ ಬೆಳೆ ಹಾನಿಯಾಗಿದೆ. ಬೆಳೆ ವಿಮೆ ನಿಯಮಾವಳಿಯಲ್ಲಿ ಕೆಲ ತೊಡಕುಗಳಿವೆ. ಹೋಬಳಿಯ ಬದಲು ಗ್ರಾಮ ಪಂಚಾಯಿತಿಯನ್ನು ಒಂದು ಘಟಕ ಎಂದು ಪರಿಗಣಿಸಿ ಬೆಳೆ ವಿಮೆ ನೀಡಬೇಕು. ಕೇಂದ್ರ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾರ್ಗಸೂಚಿಗಳನ್ನು ಬದಲಿಸಬೇಕು ಎಂದು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುತ್ತಿದ್ದೇವೆ~ ಎಂದರು.`ಬರ-ನೆರೆ ಪರಿಹಾರವೂ ಸೇರಿದಂತೆ ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಪಡೆಯಲು ಈ ವಾರದಲ್ಲಿ ದೆಹಲಿಗೆ ನಿಯೋಗ ಕರೆದೊಯ್ಯಲಾಗುವುದು~ ಎಂದು ಮುಖ್ಯಮಂತ್ರಿಗಳು ಹೇಳಿದರು. ಸಚಿವರಾದ ಮುರುಗೇಶ ನಿರಾಣಿ, ಗೋವಿಂದ ಕಾರಜೋಳ, ಎಸ್.ಕೆ. ಬೆಳ್ಳುಬ್ಬಿ, ಬಸವರಾಜ ಬೊಮ್ಮಾಯಿ, ಶಾಸಕ ಅಪ್ಪು ಪಟ್ಟಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry