ವಿಜಾಪುರ ಜಿಲ್ಲೆ: ಸಂಭ್ರಮದ ಈದ್ ಮಿಲಾದ್ ಆಚರಣೆ

7

ವಿಜಾಪುರ ಜಿಲ್ಲೆ: ಸಂಭ್ರಮದ ಈದ್ ಮಿಲಾದ್ ಆಚರಣೆ

Published:
Updated:

ವಿಜಾಪುರ: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಭಾನುವಾರ ಈದ್-ಮಿಲಾದ್  ಆಚರಿಸಲಾಯಿತು.

ಮೊಹ್ಮದ ಪೈಗಂಬರರ ಕೇಶವನ್ನು ಇಲ್ಲಿಯ ಆಸಾರ್ ಮಹಲ್‌ನಲ್ಲಿ ಪ್ರದರ್ಶಿಸಲಾಯಿತು.ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ವರೆಗೆ ಜನರು ಆಸಾರ ಮಹಲ್‌ಗೆ ಭೇಟಿ ನೀಡಿ ಮೊಹ್ಮದ ಪೈಗಂಬರರ ಕೇಶ ಇರುವ ಪೆಟ್ಟಿಗೆಯ ದರ್ಶನ ಪಡೆದರು.ಆಸಾರ ಮಹಲ್ ಎದುರು ಇರುವ ಹೊಂಡದಲ್ಲಿ ಭಕ್ತರು ಕಾಗದದಲ್ಲಿ ತಯಾರಿಸಿದ್ದ ಹಡಗುಗಳ ಮಾದರಿಗಳನ್ನು ಹರಿಬಿಟ್ಟು ಹರಕೆ ತೀರಿಸಿದರು.ಈದ್ ಹಬ್ಬದ ಅಂಗವಾಗಿ ನಗರದಲ್ಲಿ ಮೆರವಣಿಗೆ, ವಿವಿಧ ಕಾರ್ಯಕ್ರಮಗಳೂ ಜರುಗಿದವು.

ಜೆಡಿಎಸ್: `ಮುಸ್ಲಿಮರ ತ್ಯಾಗ, ಬಲಿದಾನ, ಪ್ರೀತಿ-ವಿಶ್ವಾಸಗಳ ಬಗ್ಗೆ ಸಂಶಯ ಪಡುವವರೇ ನಿಜವಾದ ಉಗ್ರವಾದಿಗಳು~ ಎಂದು ಜೆಡಿಎಸ್ ರಾಜ್ಯ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಇಲ್ಲಿಯ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಈದ್-ಮಿಲಾದ್ ಸಮಾರಂಭದಲ್ಲಿ ಕಾರ್ಯಕರ್ತರಿಗೆ ಶರಬತ್ ವಿತರಿಸಿ ಮಾತನಾಡಿದರು.`ಈ ಹಿಂದೆ ಆಳ್ವಿಕೆ ನಡೆಸಿದ ರಾಷ್ಟ್ರೀಯ ಪಕ್ಷಗಳು ಮುಸ್ಲಿಂರು ಎಂದರೆ ಉಗ್ರವಾದಿಗಳು ಎಂಬಂತಹ ವಿಚಾರವನ್ನು ದೇಶದ ನಾಗರಿಕರಲ್ಲಿ ಬೆಳೆಸಿವೆ. ಸಂದರ್ಭಕ್ಕೆ ತಕ್ಕ ಹಾಗೆ ಮುಸ್ಲಿಂರನ್ನು ಉಪಯೋಗಿಸಿಕೊಳ್ಳಲು ಇನ್ನು ಸಾಧ್ಯವಿಲ್ಲ. ಮುಸ್ಲಿಮರು ಪ್ರಜ್ಞಾವಂತರಾಗಿದ್ದು, ಎಲ್ಲವನ್ನೂ  ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ~ ಎಂದರು.ಜಿಲ್ಲೆಯಲ್ಲಿ ಕೆಲವು ಶಕ್ತಿಗಳು ಕೋಮು ಸೌಹಾರ್ದತೆಗೆ ಧಕ್ಕೆ ತರಲು ಯತ್ನಿಸುತ್ತಿವೆ. ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿದ ಪ್ರಕರಣ ಅದಕ್ಕೆ ಸಾಕ್ಷಿ. ಈ ಘಟನೆಯಲ್ಲಿ ತಮ್ಮನ್ನು ಬಲಿಪಶು ಮಾಡುವ ಷಡ್ಯಂತ್ರ ನಡೆದಿದೆ ಎಂದು ತಿಳಿದರೂ ಮುಸ್ಲಿಂ ಬಾಂಧವರು ಸಹನೆಯಿಂದ ವರ್ತಿಸಿದರು ಎಂದರು.ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾ ಪಡೇಕನೂರ, `ಮಾನವೀಯತೆಯೇ ಎಲ್ಲ ಧರ್ಮದ ತಿರುಳು. ಮಾನವೀಯತೆಯನ್ನು ಮರೆತವರು ರಾಷ್ಟ್ರದ್ರೋಹಿಗಳು~ ಎಂದರು.ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಸ್.ಎಸ್. ಖಾದ್ರಿ ಇನಾಮದಾರ, ಬಿಡಿಎ ಮಾಜಿ ಅಧ್ಯಕ್ಷ ಎಂ.ಎ. ಕಾಲೇಬಾಗ, ಜಿ.ಪಂ. ಮಾಜಿ ಅಧ್ಯಕ್ಷೆ ಅಪ್ಸರಾಬೇಗಂ ಚಪ್ಪರಬಂದ ಮಾತನಾಡಿದರು.ನಗರಸಭೆ ಸದಸ್ಯೆ ಸುಫಿಯಾ ವಾಟಿ, ನಳಿನಿ ಅಂಬಲಿ, ಚಂದ್ರಕಾಂತ ಹಿರೇಮಠ, ಸಿದ್ದು ಪಾಟೀಲ ಯತ್ನಾಳ, ಸೋಮನಗೌಡ ಪಾಟೀಲ, ಗುರುಬಾಯಿ ಹಿರೇಮಠ, ಸತ್ತಾರ ಇನಾಮದಾರ, ಜೈನುದ್ದೀನ್ ಗುಂಡಬಾವಡಿ ಇತರರು ಪಾಲ್ಗೊಂಡಿದ್ದರು.ಎಂ.ಜಿ. ಮುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಮೆಹಬೂಬ ಬಕ್ಷಿ ಸ್ವಾಗತಿಸಿದರು. ದಸ್ತಗೀರ ಸಾಲೋಟಗಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry