ಮಂಗಳವಾರ, ನವೆಂಬರ್ 19, 2019
28 °C

ವಿಜಾಪುರ ಜಿಲ್ಲೆ: 37 ನಾಮಪತ್ರ ಸಲ್ಲಿಕೆ

Published:
Updated:

ವಿಜಾಪುರ: ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಮಂಗಳವಾರ 37 ನಾಮಪತ್ರಗಳು ಸಲ್ಲಿಕೆಯಾಗಿವೆ.ಮುದ್ದೇಬಿಹಾಳ ಮತಕ್ಷೇತ್ರದಿಂದ 3, ದೇವರ ಹಿಪ್ಪರಗಿ ಮತ ಕ್ಷೇತ್ರದಿಂದ 4, ಬಸವನ ಬಾಗೇವಾಡಿ ಮತ ಕ್ಷೇತ್ರದಿಂದ 6, ಬಬಲೇಶ್ವರ ಮತ ಕ್ಷೇತ್ರದಿಂದ 3,  ವಿಜಾಪುರ ನಗರ ಮತ ಕ್ಷೇತ್ರದಿಂದ 11, ನಾಗಠಾಣ ಮತ ಕ್ಷೇತ್ರದಿಂದ 4, ಇಂಡಿ ಮತ ಕ್ಷೇತ್ರದಿಂದ 2, ಸಿಂದಗಿ ಮತಕ್ಷೇತ್ರದಿಂದ 4 ನಾಮಪತ್ರಗಳನ್ನು ಸಲ್ಲಿಸಲಾಗಿದೆ.ನಾಗಠಾಣ ಮತಕ್ಷೇತ್ರ: ಗೋಪು ರಾಠೋಡ, ಶ್ರಿಕಾಂತ ಅರಕೇರಿ, ಪ್ರೇಮಾನಂದ ಮಾಶ್ಯಾಳ, ನಿರ್ಮಲಾ ಅರಕೇರಿ (ಎಲ್ಲರೂ ಪಕ್ಷೇತರ).ವಿಜಾಪುರ ನಗರ ಮತಕ್ಷೇತ್ರ: ಅಬ್ಬಿವಕಾಶ ಅಬ್ದುಲ್‌ರಜಾಕ ಪೀರಜಾದೆ (ವೇಲ್‌ಫೇರ್ ಪಾರ್ಟಿ ಆಫ್ ಇಂಡಿಯಾ), ಗುರಿಕಾರ ಮಹ್ಮದರಫಿಕ (ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ), ಲಕ್ಷ್ಮಿಬಾಯಿ ಶಾಂತಪ್ಪ ದೇಸಾಯಿ (ಬಿಎಸ್‌ಆರ್‌ಕಾಂಗ್ರೆಸ್), ಮದರಸಾಬ ಮುಜಾವರ (ಪಕ್ಷೇತರ), ತಾಳಿಕೋಟೆ ರಾಜಅಹ್ಮದ (ಕಾಂಗ್ರೆಸ್), ಚಂದ್ರಶೇಖರ ಕಲಬುರ್ಗಿ (ಪಕ್ಷೇತರ), ಪ್ರೇಮಾನಂದ ಮಾಶ್ಯಾಳ (ಪಕ್ಷೇತರ), ನಿರ್ಮಲಾ ಶ್ರಿನಿವಾಸ ಅರಕೇರಿ (ಪಕ್ಷೇತರ).ಇಂಡಿ: ತುಳಜಾರಾಮ ಬ್ಯಾಳಿ (ಪಕ್ಷೇತರ), ಧರ್ಮಣ್ಣ ತೋಂಟಾಪುರ (ಬಹುಜನ ಸಮಾಜ ಪಕ್ಷ).

ಸಿಂದಗಿ: ನಾಗೇಶ ರಾಠೋಡ (ಪಕ್ಷೇತರ), ದಸ್ತಗೀರ ಬಾಷಾ ಮಕಾನದಾರ (ಬಿ.ಎಸ್.ಪಿ.), ಬಳಯಾನ ಸಿದ್ಧ ಒಡೆಯರ (ಪಕ್ಷೇತರ),  ಸುಣಗಾರ ಶರಣಪ್ಪ (ಕಾಂಗ್ರೆಸ್), ದೇವರ ಹಿಪ್ಪರಗಿ ಮತಕ್ಷೇತ್ರ: ಕಾಂತಪ್ಪ ಇಂಚಗೇರಿ (ಪಕ್ಷೇತರ), ಸೋಮನಗೌಡ ಪಾಟೀಲ (ಬಿಜೆಪಿ).ಬಬಲೇಶ್ವರ ಮತಕ್ಷೇತ್ರ: ಮೆಹಬೂಬ ಹಾಜಿಲಾಲ್ ಮಲಬೌಡಿ, ಸದಾಶಿವಪ್ಪ ಹಾದಿಮನಿ, ಶ್ರಿನಿವಾಸ  ಅರಕೇರಿ (ಎಲ್ಲರೂ ಪಕ್ಷೇತರ).

ಬಸವನ ಬಾಗೇವಾಡಿ ಮತಕ್ಷೇತ್ರ: ಮರಿಯಪ್ಪ ಕಟ್ಟಿ (ಬಹುಜನ ಸಮಾಜ ಪಾರ್ಟಿ), ಸಿದ್ದಪ್ಪ ಗಂಜಿ (ಪಕ್ಷೇತರ), ಅಶೋಕ ಲಮಾಣಿ (ಪಕ್ಷೇತರ), ನಜೀರ ಮಹ್ಮದಹನೀಫ್ ದುಂಡಸಿ (ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾ), ಈರಣ್ಣ ನಿಡಗುಂದಿ (ಪಕ್ಷೇತರ).

ಮುದ್ದೇಬಿಹಾಳ ಮತಕ್ಷೇತ್ರ: ಮೆಹಬೂಬ ಹಳ್ಳಿ (ಪಕ್ಷೇತರ), ಸಜ್ಜನ ರವಿಶಂಕರ (ಬಹುಜನ ಸಮಾಜ ಪಕ್ಷ), ಕಾಶೀಮಪಟೇಲ್ ಪಾಟೀಲ (ಪಕ್ಷೇತರ).

ಪ್ರತಿಕ್ರಿಯಿಸಿ (+)