ವಿಜಾಪುರ: ನೀರಿನ ದರ ದುಪ್ಪಟ್ಟು ಏರಿಕೆ

ಭಾನುವಾರ, ಜೂಲೈ 21, 2019
21 °C

ವಿಜಾಪುರ: ನೀರಿನ ದರ ದುಪ್ಪಟ್ಟು ಏರಿಕೆ

Published:
Updated:

ವಿಜಾಪುರ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಜಾಪುರ ನಗರದ ಜನತೆಗೆ ಪೂರೈಸುತ್ತಿರುವ ನೀರಿನ ದರವನ್ನು ದುಪ್ಪಟ್ಟು ಏರಿಕೆ ಮಾಡಿದೆ. ಜನ ಸಾಮಾನ್ಯರ ಮನೆ ಬಳಕೆಯ ನಳಗಳಿಗೆ ವಾರ್ಷಿಕ ರೂ 660 ಇದ್ದ ನೀರಿನ ದರ ಈಗ ರೂ 1440ಗೆ ಹೆಚ್ಚಿಸಲಾಗಿದೆ.`ಸರ್ಕಾರದ ಆದೇಶ ಹಾಗೂ ವಿಜಾಪುರ ನಗರಸಭೆಯ ಸಾಮಾನ್ಯ ಸಭೆಯ ಅನುಮೋದನೆಯ ಮೇರೆಗೆ ಈ ದರವನ್ನು ಪರಿಷ್ಕರಿಸಲಾಗಿದೆ. ಹೊಸ ದರ ಈ ತಿಂಗಳ ಒಂದರಿಂದಲೇ ಅನ್ವಯವಾಗಿದೆ. ಸೆಪ್ಟೆಂಬರ್ ಒಳಗಾಗಿ ಎಲ್ಲ ಗ್ರಾಹಕರು ತಮ್ಮ ನಳಗಳಿಗೆ ಮೀಟರ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ~ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಸನ್ನಮೂರ್ತಿ ಹೇಳಿದ್ದಾರೆ.`ಕುಡಿಯುವ ನೀರಿನ ದರಗಳನ್ನು ಪರಿಷ್ಕರಿಸಿ ಹೊಸ ದರಗಳನ್ನು ಜಾರಿಗೊಳಿಸಿ ರಾಜ್ಯ ಸರ್ಕಾರ 2011ರ ಜುಲೈ ತಿಂಗಳಲ್ಲಿಯೇ ಆದೇಶ ಹೊರಡಿಸಿದೆ. 31.3.2012ರಂದು ನಡೆದ ವಿಜಾಪುರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಠರಾವು ಕೈಗೊಂಡಿದ್ದು, ಅದರಂತೆ ಈ ದರ ಹೆಚ್ಚಳ ಮಾಡಲಾಗಿದೆ. ವಿದ್ಯುತ್, ಸಾಗಾಣಿಕೆ ವೆಚ್ಚ, ರಸಾಯನಿಕ, ಸಿಬ್ಬಂದಿ ವೇತನ ಇತರೆ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ನೀರಿನ ದರ ಏರಿಕೆ ಅನಿವಾರ್ಯವಾಗಿದೆ. ಆರು ವರ್ಷಗಳ ನಂತರ ನೀರಿನ ದರ ಏರಿಸಲಾಗಿದ್ದು, ಗ್ರಾಹಕರು ಸಹಕರಿಸಬೇಕು~ ಎಂದು ಅವರು ಕೋರಿದ್ದಾರೆ.ಮಾಸಿಕ ದರ ಹೆಚ್ಚಳ ವಿವರ ಆವರಣದಲ್ಲಿ ಹಳೆಯ ದರ ನೀಡಲಾಗಿದೆ:

ಮೀಟರ್ ಹೊಂದದೇ ಇರುವ ಗ್ರಾಹಕರಿಗೆ ಅರ್ಧ ಇಂದು ಮನೆ ಬಳಕೆ ನಳ: ರೂ 120 (ರೂ 55) ಮತ್ತು ಒಂದು ಸಲದ ಸಂಪರ್ಕ ಶುಲ್ಕ ರೂ 2000.   ಅರ್ಧ ಇಂಚು ಗೃಹೇತರ ಬಳಕೆ ನಳ: ರೂ 240 (ರೂ.110) ಮತ್ತು ಒಂದು ಸಲದ ಸಂಪರ್ಕ ಶುಲ್ಕ ರೂ.4000.  ಅರ್ಧ ಇಂಚು ವಾಣಿಜ್ಯ ಬಳಕೆ ನಳ: ರೂ 480 (ರೂ 220) ಮತ್ತು ಒಂದು ಸಲದ ಸಂಪರ್ಕ ಶುಲ್ಕ ರೂ 8000.  ಅರ್ಧ ಇಂಚಿಗಿಂತ ಹೆಚ್ಚಿಗೆ ವ್ಯಾಸದ ನಳ ಸಂಪರ್ಕಕ್ಕೆ ನಳದ ವ್ಯಾಸದನ್ವಯ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ಮೀಟರ್ ಹೊಂದಿರ ಗ್ರಾಹಕರಿಗೆ ಪ್ರತಿ ಸಾವಿರ ಲೀಟರ್‌ಗೆ ಗೃಹ ಬಳಕೆಗೆ ರೂ 7, ಗೃಹೇತರ ಬಳಕೆಗೆ ರೂ 14, ವಾಣಿಜ್ಯ ಮತ್ತು ಕೈಗಾರಿಕೆ ಬಳಕೆ ರೂ 28.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry