ಗುರುವಾರ , ಮೇ 6, 2021
24 °C

ವಿಜಾಪುರ: ಮಾಜಿ ಸೈನಿಕರ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಮಾಜಿ ಸೈನಿಕರನ್ನು ಒಂದೆಡೆ ಸೇರಿಸಿ ಅವರ ಸಮಸ್ಯೆ ಪರಿಹರಿಸಲು ರ‌್ಯಾಲಿ ನಡೆಸಲಾಗುತ್ತಿದೆ ಎಂದು ಬೆಳಗಾವಿಯ ಮರಾಠ ಲೈಟ್ ಇನ್‌ಫೆಂಟ್ರಿಯ ಬ್ರಿಗೇಡಿಯರ್ ಸಿ.ಕೆ. ರಮೇಶ ಹೇಳಿದರು.ಬೆಳಗಾವಿಯ ಮರಾಠ ಲೈಟ್ ಇನ್‌ಫೆಂಟ್ರಿ, ಜಿಲ್ಲಾ ಆಡಳಿತ, ಜಿಲ್ಲಾ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆ ಆಶ್ರಯದಲ್ಲಿ ಮಾಜಿ ಸೈನಿಕರಿಗೆ ಇರುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ಬುಧವಾರ ಇಲ್ಲಿಯ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಆಯೋಜಿಸಿದ್ದ `ಮಾಜಿ ಸೈನಿಕರ ರ‌್ಯಾಲಿ~ಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ರ‌್ಯಾಲಿ ಉದ್ಘಾಟಿಸಿದ ಜಿಲ್ಲಾಧಿಕಾರಿ ಶಿವಯೋಗಿ ಕಳಸದ, ದೇಶದ ರಕ್ಷಣೆಗಾಗಿ ದುಡಿದ ಮಾಜಿ ಸೈನಿಕರಿಗೆ ಹಾಗೂ ಅವರ ಅವಲಂಬಿತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳನ್ನು  ಜಾರಿಗೊಳಿಸಿವೆ. ಈ ಯೋಜನೆಗಳ ಕುರಿತಂತೆ ಜಾಗೃತಿ ಮೂಡಿಸಲು ತಾಲ್ಲೂಕು ಮಟ್ಟದಲ್ಲಿ ಮಾಜಿ ಸೈನಿಕರ ರ‌್ಯಾಲಿ ನಡೆಸಬೇಕು ಎಂದು ಸಲಹೆ ನೀಡಿದರು.ರ‌್ಯಾಲಿಯಲ್ಲಿ 500 ಮಾಜಿ ಸೈನಿಕರು ಭಾಗವಹಿಸಿದ್ದರು.  ಅಶಕ್ತ ಮಾಜಿ ಸೈನಿಕರಿಗೆ ವ್ಹೀಲ್ ಚೇರ್ ಮತ್ತಿತರ ಸಾಮಗ್ರಿ ವಿತರಿಸಲಾಯಿತು. ಸೈನಿಕ ಶಾಲೆಯ ಪ್ರಾಚಾರ್ಯ ಕರ್ನಲ್ ಆರ್.ಬಾಲಾಜಿ, ಲೆಫ್ಟಿನೆಂಟ್ ಕರ್ನಲ್ ಎಸ್.ಸಿ. ಕುಲಕರ್ಣಿ, ಮಾಜಿ ಸೈನಿಕ ಹಾಗೂ ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಜೆ.ಆರ್. ಬಾಲಸುಬ್ರಹ್ಮಣ್ಯ, ನಿವೃತ್ತ ಕರ್ನಲ್ ಗುಡ್ಡದ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.