ವಿಜೃಂಭಣೆಯ ತಿರುಮಲೇಶ್ವರ ಉತ್ಸವ

7

ವಿಜೃಂಭಣೆಯ ತಿರುಮಲೇಶ್ವರ ಉತ್ಸವ

Published:
Updated:

ಅರಸೀಕೆರೆ: ಶರನ್ನವರಾತ್ರಿ ಹಾಗೂ ದಸರಾ ಹಬ್ಬದ ಅಂಗವಾಗಿ ತಾಲ್ಲೂ ಕಿನ ಮಾಡಾಳು ಗ್ರಾಮದ ತಿರುಮ ಲೇಶ್ವರ ಉತ್ಸವ ಗುರುವಾರ ಸಂಜೆ ಬೀದಿಗಳಲ್ಲಿ ಮಂಗಲ ವಾದ್ಯದೊಂ ದಿಗೆ ವಿಜೃಂಭಣೆಯಿಂದ ನಡೆಯಿತು.ದಸರಾ ಅಂಗವಾಗಿ ಒಂಭತ್ತು ದಿನ ಗಳಿಂದ ಗ್ರಾಮದ ಮಧ್ಯ ಭಾಗದಲ್ಲಿ ರುವ ತಿರುಮಲೇಶ್ವರ ದೇವಾಲಯ ದಲ್ಲಿ ವಿಶೇಷ ಪುಷ್ಪಾ ಲಂಕೃತ ಮಂಟ ಪದಲ್ಲಿ ಅಶ್ವಾರೋಹಿಯಾಗಿ ದೇವರು ಪಟ್ಟಕ್ಕೆ ಕುಳಿತು ವಿಶೇಷ ಪೂಜೆ  ನಡೆ ದವು. ಗುರುವಾರ ಸಂಜೆ ತಿರು ಮಲ ದೇವಾಲಯದ ವಿವಿಧ ಛತ್ರಿ ಚಾಮರ ಹಾಗೂ ಬಿರುದಾವಳಿ ಗಳೊಂದಿಗೆ ಮಂಗಲವಾದ್ಯದೊಂದಿಗೆ ಅಶ್ವಾರೋ ಹಿಯಾಗಿ ಪುಷ್ಪಾಲಂಕೃತ ಮಂಟಪದಲ್ಲಿ ತಿರುಮಲ ದೇವರನ್ನು ಪ್ರತಿಷ್ಠಾಪಿಸಿ ಉತ್ಸವದಲ್ಲಿ ಪಂಚಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆಕರೆದೊಯ್ಯಲಾಯಿತು.ಬನ್ನಿ ಮರದ ಮುಂಭಾಗ ತಿರುಮಲ ದೇವರನ್ನು ಕೂರಿಸಲಾಯಿತು. ಬಳಿಕ ನೊರೊಂದೆಡೆ ಸೇವೆ, ಬಿಲ್ಲು-ಬಾಣ ಮತ್ತು ವಿವಿಧ ರೀತಿಯ ಆಯುಧ  ಇಟ್ಟು ಪೂಜೆ ಸಲ್ಲಿಸಲಾಯಿತು. ನಂತರ ಬನ್ನಿಯನ್ನು ಭಕ್ತರಿಗೆ ವಿತರಿಸಿ ವಿಜಯ ದಶಮಿ ಹಾಗೂ ಶರನ್ನವರಾತ್ರಿ ದಸರಾಕ್ಕೆ ತೆರೆ ಬಿದ್ದಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry