ಗುರುವಾರ , ಮೇ 13, 2021
22 °C

ವಿಜೃಂಭಣೆಯ ಪಂಚ ಮಹಾರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಂಜನಗೂಡು:  ~ದಕ್ಷಿಣಕಾಶಿ~ ಎಂಬ ಪ್ರಖ್ಯಾತಿ ಹೊಂದಿರುವ ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದೊಡ್ಡಜಾತ್ರಾ ಮಹೋತ್ಸವದ ವಾರ್ಷಿಕ ಪಂಚ ಮಹಾರಥೋತ್ಸವ ಸಹಸ್ರಾರು ಭಕ್ತರ ಹರ್ಷೋದ್ಗಾರದ ನಡುವೆ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.

ಬೆಳಿಗ್ಗೆ 5.40 ರಿಂದ 6.40ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ಶ್ರೀಕಂಠೇಶ್ವರಸ್ವಾಮಿ, ಪಾರ್ವತಿ, ಗಣಪತಿ, ಸುಬ್ರಹ್ಮಣ್ಯ ಮತ್ತು ಚಂಡಿಕೇಶ್ವರ ದೇವರ ಉತ್ಸವಮೂರ್ತಿಗಳನ್ನು ದೇವಾಲಯದಿಂದ ತಂದು 5 ಪ್ರತ್ಯೇಕ ರಥಗಳ ಮಂಟಪದ ಪೀಠದ ಮೇಲೆ ಪ್ರತಿಷ್ಠಾಪಿಸಲಾಯಿತು. ಆಗಮಿಕ ಶಾಸ್ತ್ರದಂತೆ ಅರ್ಚಕರು ಪೂಜಾ, ವಿಧಿ-ವಿಧಾನಗಳನ್ನು ಪೂರೈಸಿ ಮಂಗಳಾರತಿ ಮಾಡಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಾತ್ರಿಯಿಂದಲೇ ಸಾಗರೋಪಾದಿಯಲ್ಲಿ ಜಮಾಯಿಸಿದ್ದ ಭಕ್ತರು ಹರ್ಷೋದ್ಗಾರ ಮಾಡುತ್ತಾ ರಥಗಳನ್ನು ಎಳೆಯಲು ಪ್ರಾರಂಭಿಸಿದರು.

ತೆಪ್ಪೋತ್ಸವ: ದೊಡ್ಡ ಜಾತ್ರೆಯ ಮತ್ತೊಂದು ಪ್ರಮುಖ ಕಾರ್ಯಕ್ರಮವಾದ ತೆಪ್ಪೋತ್ಸವ ದೇವಾಲಯಕ್ಕೆ ಸಮೀಪದ ಕಪಿಲಾ ನದಿಯಲ್ಲಿ ವಿದ್ಯುತ್ ದೀಪಾಲಂಕೃತ  ತೇಲುವ (ಯಾಂತ್ರಿಕ ದೋಣಿ) ದೇವಾಲಯದಲ್ಲಿ ಏ.5ರ ರಾತ್ರಿ 7 ಗಂಟೆಗೆ  ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.