ವಿಜೃಂಭಣೆಯ ಬನಶಂಕರಿ ರಥೋತ್ಸವ

7

ವಿಜೃಂಭಣೆಯ ಬನಶಂಕರಿ ರಥೋತ್ಸವ

Published:
Updated:

ಹನುಮಸಾಗರ: ಇಲ್ಲಿನ ಶ್ರೀಬನಶಂಕರಿ ದೇವಸ್ಥಾನದ ಜಾತ್ರಾಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ವಿವಿಧ ಕಾರ್ಯಕ್ರಮಗಳ ಬಳಿಕ ಸಾವಿರಾರು ಜನರ ಸಮ್ಮುಖದಲ್ಲಿ ದೇವಿಯ ಮಹಾ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.ಕಳೆದ ವಾರದಿಂದಲೇ ದೇವಸ್ಥಾನದಲ್ಲಿ ಗರುಡಪಟದ ಪೂಜಾ ಕಾರ್ಯಕ್ರಮ, ಪಲ್ಲಕ್ಕಿ ಉತ್ಸವ, ಹುಚ್ಚಯ್ಯ ಕಾರ್ಯಕ್ರಮ, ಕಳಸದ ಮೆರವಣಿಗೆಯಂತಹ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದವು.ಬೆಳಿಗ್ಗೆ ಹುಚ್ಚಯ್ಯದ ಮೆರವಣಿಗೆ ಮತ್ತು ಗಾಯತ್ರಿ ಹೋಮಗಳು ಜರುಗಿದವು. ಮಧ್ಯಾಹ್ನ ಶ್ರೀ ಬನಶಂಕರಿ ದೇವಿಗೆ ಮಹಾ ಅಭಿಷೇಕ ನಡೆಯಿತು. ಸಂಜೆ ಮಡಿಕ್ಕೇರಿ ಗ್ರಾಮದಿಂದ ಬಂದ ಹಗ್ಗದ ಮೆರವಣಿಗೆಯ ನಂತರ ಶ್ರೀಬನಶಂಕರಿ ದೇವಿಯ ರಥೋತ್ಸವ ಸಡಗರ ಸಂಭ್ರಮದಿಂದ ಜರುಗಿತು.

 

ದೇವಾಂಗ ಸಮಾಜ ಶ್ರೀವಿವೇಕಾನಂದ ಸ್ವಾಮಿಗಳು, ಹಾಗೂ ವಿವಿಧ ಸಮಾಜಗಳ ಮುಖಂಡರು ರಥೋತ್ಸವಕ್ಕೆ ಚಾಲನೆ ನೀಡಿದರು.

ರಥೋತ್ಸವದಲ್ಲಿ ಹನುಮಸಾಗರ ಸೇರಿದಂತೆ ಗ್ರಾಮದ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry