ವಿಜೃಂಭಣೆಯ ಮುರುಘೇಂದ್ರ ಶ್ರೀಗಳ ರಥೋತ್ಸವ

7

ವಿಜೃಂಭಣೆಯ ಮುರುಘೇಂದ್ರ ಶ್ರೀಗಳ ರಥೋತ್ಸವ

Published:
Updated:
ವಿಜೃಂಭಣೆಯ ಮುರುಘೇಂದ್ರ ಶ್ರೀಗಳ ರಥೋತ್ಸವ

ಧಾರವಾಡ: ಇಲ್ಲಿಯ ಮುರುಘಾ ಮಠದ ಶ್ರೀಮದ್ ಅಥಣಿ ಮುರುಘೇಂದ್ರ ಶಿವಯೋಗಿಗಳ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರಗಳ ಮಧ್ಯೆ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.ತಾಲ್ಲೂಕಿನ ಕರಡಿಗುಡ್ಡ, ಅಮ್ಮಿನಬಾವಿ, ಹೆಬ್ಬಳ್ಳಿ ಸೇರಿದಂತೆ ವಿವಿಧ ಊರುಗಳಿಂದ  ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಸ್ವಾಮೀಜಿಯವರ ಮೂರ್ತಿ ಇಟ್ಟಿದ್ದ ತೇರನ್ನು ಹೂವಿನಿಂದ ಸಿಂಗರಿಸಲಾಗಿತ್ತು. ಭಕ್ತರು ತೇರಿಗೆ ಬಾಳೆಹಣ್ಣು, ನಿಂಬೆಹಣ್ಣು ಹಾಗೂ ಉತ್ತತ್ತಿ ಬೀಜಗಳನ್ನು ತೂರುವ ಮೂಲಕ ಭಕ್ತಿ ನಮನ ಸಮರ್ಪಿಸಿದರು. ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಹುಬ್ಬಳ್ಳಿ ಹೊಸಮಠದ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಮಡಿವಾಳ ಸ್ವಾಮೀಜಿ ಸೇರಿಂದತೆ ಅನೇಕರು ರಥೋತ್ಸವದ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry