ಶುಕ್ರವಾರ, ಜೂನ್ 18, 2021
27 °C

ವಿಜ್ಞಾನದ ಚಮತ್ಕಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎದೆಯ ಮೇಲೆ ಗಾಯವಿಲ್ಲದೆ, ಶಸ್ತ್ರಚಿಕಿತ್ಸೆ ಇಲ್ಲದೇ ಜೀವ ಉಳಿಸುವ ಅದ್ಭುತ ವಿಧಾನ.

                                          ============ 

ವಿನಯ ಎನ್ನುವ 14 ವರ್ಷದ 7ನೇ ಕ್ಲಾಸ್ ಓದಿ ಶಾಲೆ ಬಿಟ್ಟು ಕುಳಿತ ಹುಡುಗನೇ ಈ ನಿಸರ್ಗದ ವಿಸ್ಮಯ. ಎಲ್ಲರಿಗೂ ಹೃದಯ ಎಡಗಡೆಗೆ ಇದ್ದರೆ ಇವನಿಗೆ ಕನ್ನಡಿಯ ಪ್ರತಿಬಿಂಬದಂತೆ ಪ್ರತಿಯೊಂದೂ ಬಲಗಡೆಗೆ (ಮಿರರ್ ಇಮೇಜ್ ಡೆಕ್ಸ್‌ಟ್ರೊಕಾರ್ಡಿಯಾ).ಅವನ ಹೊಟ್ಟೆಯಲ್ಲಿರುವ ಎಲ್ಲಾ ಅವಯವಗಳು ಅದಲು ಬದಲು.  ಇಷ್ಟೂ ಸಾಲದು ಎನ್ನುವಂತೆ ಹೃದಯದಲ್ಲಿರುವ ನಾಲ್ಕು ಕವಾಟುಗಳಲ್ಲಿ ಎರಡು ಮುಚ್ಚಿಕೊಂಡು ರಕ್ತ ಮುಂದೆ ಹರಿಯಲು ಅಡೆತಡೆಯಾಗಿತ್ತು! ಮನೆಗೆ ಹೆಬ್ಬಾಗಿಲು ತರದ ಹೃದಯದ ಮುಂದಿನ ದ್ವಾರವೇ ಮಹಾಧಮನಿಯ ಬಾಗಿಲು(ಅಯೊರ್ಟಿಕ್ ವಾಲ್ವ್).ಇದು ಮುಚ್ಚಿಕೊಂಡು ಶರೀರಕ್ಕೆ ರಕ್ತದ ಮುಖಾಂತರ ಪ್ರಾಣವಾಯು ಪೋಷಣೆ ಸರಬರಾಜು ಮಾಡಲಾಗದೆ ಒತ್ತಳ್ಳುವ ಮುಖ್ಯ ಹೃತ್‌ಕಕ್ಷಿ (ಲೆಫ್ಟ್ ವೆಂಟ್ರಿಕಲ್) ತನ್ನ ಒತ್ತಡವನ್ನು ಸಾಮಾನ್ಯವಾಗಿರುವ 100-120 ರಿಂದ 320ಕ್ಕೆ ಏರಿಸಿತ್ತು. ಇಂಥ ಮಕ್ಕಳು ಥಟ್ ಅಂತ ಸಾಯುವ ಸಂಭವ ಹೆಚ್ಚು . ಆದರೆ ಇವನು `ನಡೆದರೆ ಉಸಿರು ಕಟ್ಟುತ್ತದೆ. ಎದೆ ನೋವು ಬರುತ್ತದೆ ಸುಸ್ತಾಗಿ ಕುಳಿತುಕೊಳ್ಳಬೇಕಾಗುತ್ತದೆ~ ಎಂದು ಹೇಳುತ್ತಾ ಆಸ್ಪತ್ರೆಗೆ ಬಂದಿದ್ದ. ಪರೀಕ್ಷೆ ಮಾಡಿ ಎಕೊಕಾರ್ಡಿಯೊಗ್ರಫಿ ಮಾಡಿದರೆ; ಹೃದಯದ ಇನ್ನೊಂದು ಪ್ರಮುಖ ಬಾಗಿಲು (ಮಿಟ್ರಾಲ್ ವಾಲ್ವ್) ರಕ್ತನಾಳಗಳಲ್ಲಿ ಒತ್ತಡ ಹೆಚ್ಚಾಗಿತ್ತು.ನಮ್ಮ ರಾಜ್ಯದಲ್ಲಿ ಪ್ರಥಮ ಬಾರಿ ಇಂಥ ರೋಗಿಯನ್ನು ನೋಡುತ್ತಿದ್ದೆವು. ತುರ್ತು ಬಲೂನು ಚಿಕಿತ್ಸೆಗೆ ತೆಗೆದುಕೊಂಡೆವು. ಸಾಮಾನ್ಯವಾಗಿ ನಾವು ಬಲೂನನ್ನು ಬಲಗಾಲಿನ ತೊಡೆಯಲ್ಲಿರುವ ರಕ್ತನಾಳಗಳ (ಫೆಮೊರಲ್ ವೀನ್ ಅಂಡ್ ಆರ್ಟರಿ) ಮುಖಾಂತರ ಹಾಕುತ್ತೇವೆ. ಆದರೆ ಇವನಿಗೆ ಹೊಟ್ಟೆಯಲ್ಲಿ ಅವಯವಗಳ ಜೊತೆಗೆ ಮಹಾಧಮನಿ, ಅಪಧಮನಿಗಳೂ ಅದಲು ಬದಲಾಗಿ ಬಲಗಡೆಯಿಂದ ಗೈಡ್ ವೈರ್ ಹೋಗಲಿಲ್ಲ.ಎಡಗಡೆಯಿಂದ ಪ್ರಯತ್ನ ಮಾಡಿ ಮೊದಲು  ಮಿಟ್ರಾಲ್ ವಾಲ್ವ್  ನಂತರ  ಅಯಾರ್ಟಿಕ್ ವಾಲ್ವ್‌ಅನ್ನು ಬಲೂನು ತೂರು ನಳಿಕೆಯ ಮುಖಾಂತರ ಒತ್ತಿ ಮುಚ್ಚಿದ ಬಾಗಿಲು ತೆಗೆದವು. ಆದರೆ ಮಹಾದ್ವಾರ ಎಷ್ಟು ಪ್ರಯತ್ನಪಟ್ಟರು ಬಿಚ್ಚಿಕೊಳ್ಳುತ್ತಿಲ್ಲ.

 

ಆಗ ಬಲೂನಿನಲ್ಲಿಯ ಒತ್ತಡ ಹೆಚ್ಚಿಸಿದಾಗ ಅದು ಒಡೆದು ಕೊಂಡಿತು. ಆದರೆ ತನ್ನ ಕೆಲಸ ಮಾಡಿತ್ತು! ಮುಚ್ಚಿದ ಬಾಗಿಲು ತೆಗೆದುಕೊಂಡು ರಕ್ತ ಚಲನೆ ಕ್ರಮಬದ್ಧವಾಗಿ ನಡೆಯಿತು. ಸಾವಿನ ದವಡೆಯಿಂದ ಹುಡುಗನನ್ನು ಉಳಿಸಿದ ಸಂತಸ ನಮಗೆ.ವೈಜ್ಞಾನಿಕವಾಗಿ ಇಂಥ ವಿಸ್ಮಯವನ್ನು ನಾವು ತಾಯಿಯ ಗರ್ಭದಲ್ಲಿರುವ ಭ್ರೂಣದಲ್ಲಿ  `ಫೀಟಲ್ ಎಕೊ~ ಮುಖಾಂತರ ಕಂಡು ಹಿಡಿಯಬಹುದು. ಮುಂದೆ ಮಗು ಹುಟ್ಟಿದ ನಂತರ ಎಕೊ ಕಾರ್ಡಿಯೊಗ್ರಫಿ  ಮುಖಾಂತರ ಕಂಡು ಹಿಡಿಯಬಹುದು.ಇಂಥ ಹೃದಯದಲ್ಲಿ ರಂಧ್ರವಿದ್ದರೆ ಅದನ್ನು ಶಸ್ತ್ರಚಿಕಿತ್ಸೆ ಇಲ್ಲದೆ ಡಿವೈಸ್ ಮುಖಾಂತರ ಮುಚ್ಚಬಹುದು. ನಿಸರ್ಗದ ವಿಸ್ಮಯಕ್ಕೆ ವಿಜ್ಞಾನದ ಚಮತ್ಕಾರ! ಎದೆಯ ಮೇಲೆ ಗಾಯವಿಲ್ಲದೆ, ಶಸ್ತ್ರಚಿಕಿತ್ಸೆ ಇಲ್ಲದೇ ಜೀವ ಉಳಿಸುವ ಅದ್ಭುತ ವಿಧಾನ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.