`ವಿಜ್ಞಾನ ಅನಂತವಲ್ಲ'

ಮಂಗಳವಾರ, ಜೂಲೈ 23, 2019
24 °C

`ವಿಜ್ಞಾನ ಅನಂತವಲ್ಲ'

Published:
Updated:

ಕಾರ್ಕಳ: ಜ್ಯೋತಿಷ್ಯ ಎಂದರೆ ಕಾಲ ಹಾಗೂ ವ್ಯಕ್ತಿ ಸ್ವಭಾವಗಳ ವಿಶ್ಲೇಷಣೆ ಮಾಡುವುದು. ಕಾಲಗಣನೆಗೆ ಮತ್ತು ಸ್ವಭಾವ ಪರೀಕ್ಷಣಗಳಲ್ಲಿ ಜ್ಯೋತಿಷಿ ವಿಫಲನಾದ ಸಂದರ್ಭದಲ್ಲಿ ಜ್ಯೋತಿಷ್ಯ ಮೌಢ್ಯ ಎಂಬ ಭಾವನೆಗೆ ಅವಕಾ ಶವಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರಜ್ಞ ಅಲಂಪಾಡಿ ಸುಕುಮಾರ ಶಾನುಭಾಗ ತಿಳಿಸಿದರು.ಇಲ್ಲಿನ ಸಾಹಿತ್ಯ ಸಂಘದ ಆಶ್ರಯ ದಲ್ಲಿ ಇತ್ತೀಚೆಗೆ `ಜ್ಯೋತಿಷ್ಯ: ವಿಜ್ಞಾನವೇ? ಮೌಢ್ಯವೇ?' ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ವಿಜ್ಞಾನವೂ ಅನಂತವಲ್ಲ. ಅದಕ್ಕೆ ವ್ಯಕ್ತಿಯ ಬುದ್ಧಿಶಕ್ತಿಯ ಮಿತಿಯಿದೆ. ಎಂದು ಹೇಳಿದ ಅವರು, ಒಬ್ಬ ವಿಜ್ಞಾನಿ ತನ್ನ ಚಿಂತನೆ, ವಿಶ್ಲೇ ಷಣೆ ಹಾಗೂ ಅಧ್ಯಯನ ಮುಂತಾ ದವುಗಳ ಆಧಾರದಲ್ಲಿ ಕೆಲವು ನಿರ್ಣ ಯಗಳನ್ನು ಹೊಂದುತ್ತಾನೆ.

ಆದರೆ ಅವುಗಳೇ ಸತ್ಯವೆನಿಸವು. ಅವುಗಳ ಆಚೆಗೂ ವಿಜ್ಞಾನಿಯ ಗ್ರಹಣ ಶಕ್ತಿಗೆ ಮೀರಿದ ಸತ್ಯಾಂಶ ಇರಬಹುದಾದ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದರು.ಸಾಹಿತ್ಯ ಸಂಘದ ಸಂಚಾಲಕ ಪ್ರೊ.ಎಂ.ರಾಮಚಂದ್ರ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಉಪ ನ್ಯಾಸಕ ಬೇಬಿ ಈಶ್ವರಮಂಗಲ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದೇವಿದಾಸ್ ನಾಯ್ಕ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry